ನ್ಯೂಸ್ ನಾಟೌಟ್ : ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಕೊಡಗು ಜಿಲ್ಲೆಯ ಕೆಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ಸಾಧಾರಣ ಮಳೆಯಾಗಿದ್ದು,ಭೂಮಿ ತಂಪಾಗಿದೆ. ಮೂರ್ನಾಡು, ನಾಪೋಕ್ಲು ಹಾಗೂ ಕಿಗ್ಗಾಲು ಗ್ರಾಮದಲ್ಲಿ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯಲ್ಲಿ ಕಾಫಿ ತೋಟ ಬಿಸಿಲಿನಿಂದಾಗಿ ಒಣಗುತ್ತಿರುವ ಬಗ್ಗೆಯೂ ವರದಿಯಾಗಿತ್ತು.ಈ ಹಿನ್ನಲೆಯಲ್ಲಿ ರೈತರು ಕಂಗಾಲಾಗಿದ್ದರು.ಇದೀಗ ಮಳೆರಾಯನ ಆಗಮನದಿಂದಾಗಿ ರೈತರು ಖುಷಿಯಿಂದಿದ್ದಾರೆ.ಆದರೂ ಇನ್ನು ಕೆಲವು ಕಡೆ ಬಿಸಿಲು ಮುಂದುವರಿದಿದೆ.