ನ್ಯೂಸ್ ನಾಟೌಟ್ : ಅಪರೂಪದ ಮೀನೊಂದು ಕಾಸರಗೋಡಿನ ಸಮುದ್ರದ ತೀರದಲ್ಲಿ ಪತ್ತೆಯಾಗಿದೆ. ಇದಕ್ಕೆ ಗಿಟಾರ್ ಫಿಶ್ ಎಂದು ಹೆಸರಿಡಲಾಗಿದೆ. ಇದು ಚಿಕ್ಕ ಶಾರ್ಕ್ ಗಳಲ್ಲಿ ಒಂದಾಗಿದ್ದು, ಸುಮಾರು 1 ಅಡಿ ಉದ್ದವನ್ನು ಹೊಂದಿದೆ. ಕಡಲತೀರಗಳಲ್ಲಿ ಅಪರೂಪವಾಗಿ ಈ ಮೀನುಗಳು ಕಂಡು ಬರುತ್ತವೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಇದು ಇಲ್ಲಿಯವರೆಗೆ ಯಾರ ಕಣ್ಣಿಗೂ ಬಿದ್ದಿಲ್ಲ. ಯಾಕೆಂದರೆ ಇದು ತೀರಾ ನಾಚಿಕೆ ಸ್ವಭಾವವನ್ನು ಹೊಂದಿರುವ ಮೀನು ಎಂದು ಹೇಳಲಾಗಿದೆ.ಸಮುದ್ರದ ಆಳದಲ್ಲಿ ವಾಸಿಸುವ ಮೀನು ಇದಾಗಿದ್ದು,ತೀರಾ ಅಪರೂಪವೆಂಬಂತಿದೆ.ಈ ಕುರಿತು ಮಾತನಾಡಿದ ಕಾಸರಕೋಡಿನ ಇಕೋ ಬೀಚ್ನ ವ್ಯವಸ್ಥಾಪಕ ವಿನೋದ್ ಎಸ್ ಸಿದ್ಲಾನಿ ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಇದು ಚಿಕ್ಕ ಶಾರ್ಕ್ಗಳಲ್ಲಿ ಒಂದಾಗಿದ್ದು,ಅಪರೂಪವಾಗಿ ಕಂಡುಬರುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳಿದ್ದಾರೆ. ಸಮುದ್ರ ಜೀವಶಾಸ್ತ್ರ ವಿಭಾಗದ ಸಂಶೋಧಕ ಸೂರಜ್ ಪೂಜಾರ್ ನಾಚಿಕೆ ಸ್ವಭಾವವುಳ್ಳ ಮೀನು ಇದಾಗಿದ್ದು, ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.ಮತ್ತೊಬ್ಬ ಸಂಶೋಧಕ ಕಿರಣ್ ವಾಸುದೇವಮೂರ್ತಿ ಮಾತನಾಡಿ ಈ ಮೀನು ಫೈಟೊಪ್ಲಾಂಕ್ಟನ್ ಮತ್ತು ಝೂಪ್ಲ್ಯಾಂಕ್ಟನ್ಗಳನ್ನು ತಿನ್ನುವ ಜತೆಗೆ ಈ ಮೀನುಗಳು ಬೇಟೆಯಾಡಲು ದೇಹದಿಂದಲೇ ವಿದ್ಯುತ್ ರೀತಿಯ ತರಂಗಗಳನ್ನು ಉತ್ಪಾದಿಸಿ ಹೊರಬಿಡುತ್ತವೆ. ಸಮುದ್ರದ ಆಳದಲ್ಲಿ ವಾಸಿಸುವ ಮೀನುಗಳು, ಮೇಲೆ ಬರುವುದು ಅತ್ಯಂತ ವಿರಳ ಎಂದು ತಿಳಿಸಿದ್ದಾರೆ.