ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಮಾಡಬಾರದ ಮಹಾಎಡವಟ್ಟೊಂದನ್ನು ಮಾಡಿದ್ದಾನೆ.ಯಾರೋ ಬೈದರು ಎಂದು ಹೇಳಿ ಆತನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಹುಣಸೂರಿನಲ್ಲಿ ನಡೆದಿದೆ.ಹುಣಸೂರಿನ ತೊಂಡಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಮತ್ತಿನಲ್ಲಿ ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾನೆ.ಕುಡಿದು ಹುಚ್ಚಾಟವಾಡುವುದು ಸಹಜ ಆದರೆ ಈ ರೇಂಜ್ ಗೆ ಹುಚ್ಚಾಟವಾಡೋದಾ? ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾನೆ.
ರಾಜಶೆಟ್ಟಿ ಎಂಬಾತ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡ ವ್ಯಕ್ತಿ. ಕಳೆದ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ತೇಲಾಡಿಕೊಂಡಿದ್ದ ಈತ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ ಎನ್ನಲಾಗಿದೆ. ತೂರಾಡುತ್ತಲೆ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಸ್ವಲ್ಪ ಸಮಯವಾಗುತ್ತಿದ್ದಂತೆ ನೋವಿನಿಂದ ಕೂಗಿಕೊಂಡಾಗ ಸ್ಥಳೀಯರು ಬಂದು ಆತನನ್ನು ಹುಣಸೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತ ಚೇತರಿಸಿಕೊಂಡಿದ್ದು, ಗ್ರಾಮಸ್ಥರು ಘಟನೆಗೆ ಆಚ್ಚರಿ ಜತೆಗೆ ಮುಜುಗರ ಕೂಡ ವ್ಯಕ್ತಪಡಿಸಿದ್ದಾರೆ.