ನ್ಯೂಸ್ ನಾಟೌಟ್: ಕಾರ್ಕಳದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ಹೆಚ್ಚಿನ ವಿಶೇಷತೆಯನ್ನು ಪಡೆಯುತ್ತಿದೆ. ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಈ ನಡುವೆ ನೆಚ್ಚಿನ ಜನ ನಾಯಕ ಸುನಿಲ್ ಕುಮಾರ್ ಮತ್ತೊಮ್ಮೆ ಆಯ್ಕೆಯಾಗಿ ಬರಬೇಕು ಅನ್ನುವ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ.
ಕಾರ್ಕಳದ ತಾ.ಪಂ.ಮಾಜಿ ಅಧ್ಯಕ್ಷ ವಿಕ್ರಮ್ ಹೆಗ್ಡೆ ಮಾತನಾಡಿ, ಕಾರ್ಕಳಕ್ಕೆ ಕೆಲಸಗಾರ ಶಾಸಕ ಸುನಿಲ್ ಕುಮಾರ್ ಬೇಕು ಹೊರತು ಜಾತಿವಾದಿ ಶಾಸಕನಲ್ಲ ಎಂದರು. ಈ ಮೂಲಕ ಬಿಜೆಪಿ ಮತನೀಡಿ ಎನ್ನುವ ಮನವಿಯನ್ನು ಅವರು ಮಾಡಿದ್ದಾರೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಕಳ ಕ್ಷೇತ್ರವನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಅವರು ಪ್ರಗತಿಯ ಉತ್ತುಂಗಕ್ಕೆ ಏರಿಸಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್ , ಅಂತರ್ಜಲದಂತಹ ಅಭಿವೃದ್ಧಿಗೆ ಒತ್ತು ನೀಡಿದಷ್ಟೇ ಅಲ್ಲ ಪ್ರತಿ ಸಾಮಾನ್ಯನ ಕಷ್ಟ ಸುಖಗಳಿಗೆ ಅವರು ಐದು ವರ್ಷವೂ ನಿಂತು ಕೆಲಸ ಮಾಡಿದ್ದಾರೆ. ಅಂತಹ ನಾಯಕನಿಗೆ ನಾವೆಲ್ಲ ಸೇರಿ ಮತಹಾಕಬೇಕಿದೆ ಎಂದು ತಿಳಿಸಿದರು.ಸುಮಿತ್ ಶೆಟ್ಟಿ, ರವೀಂದ್ರ ನಾಯಕ್, ಮಾಲಿನಿ ಶೆಟ್ಟಿ, ಜಗದೀಶ ಪೂಜಾರಿ, ಸಂತೋಷ್ ವಾಗ್ಲೆ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದೇವೇಳೆ ಸುನಿಲ್ ಕುಮಾರ್ ಸಾರ್ವಜನಿಕರಲ್ಲಿ ಮತಯಾಚಿಸಿದರು.