ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್: ಕಾರ್ಕಳ ಈಗ ಸ್ವರ್ಣ ಕಾರ್ಕಳವಾಗಿ ಬದಲಾಗಿದೆ. ಹಲವಾರು ಅಭಿವೃದ್ಧಿ ಕೆಲಸಗಳು ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದಿದೆ. ಅಂತಹ ಅಭಿವೃದ್ಧಿಗಳ ಸಾಲಿಗೆ ಈಗ 800 ವರ್ಷ ಇತಿಹಾಸವಿರುವ ಮಾರಿಯಮ್ಮನ ಚಿಕ್ಕ ಗುಡಿ ಕೂಡ ಸೇರಿಕೊಂಡಿದೆ. ಈಗ ಗುಡಿಯನ್ನು ಜೀರ್ಣೋದ್ದಾರ ಮಾಡಲಾಗಿದ್ದು ಏ. 16 , ರಿಂದ 16 , 25 ರ ವರೆಗೆ ಬ್ರಹ್ಮ ಕಲಶೋತ್ಸವ ನೆರವೇರಿತು. ಮಾರಿಯಮ್ಮನ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು.
ದೇವಸ್ಥಾನದ ಒಳಗೆ ಏನೇನಿದೆ?
ದೇವಸ್ಥಾನವನ್ನು ವಿವಿಧ ವಿನ್ಯಾಸದ ಕಲ್ಲಿನಲ್ಲಿ ಕೆತ್ತಲಾಗಿದೆ. ಅಲ್ಲದೆ ನರಸಿಂಗ ಚಿತ್ರ, ದೇವಿಯ ಚಿತ್ರ ಕೆತ್ತಿಸಲಾಗಿದ್ದು ಮರಗಳಿಂದ ವಿವಿಧ ಆಕೃತಿಯಿಂದ ಕೂಡಿದೆ . ಇಲ್ಲಿ ವಿಶೇಷವಾಗಿ ಉಚ್ಚತಂಗಿ ಮಾರಿಯಮ್ಮ , ಹನುಮ ಪ್ರತಿಷ್ಠೆ , ನಾಗನ ಕಟ್ಟೆ ಇದೆ. ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಊರ, ಪರವೂರಿನಿಂದ ಅನೇಕ ಪ್ರವಾಸಿಗರು ಬಂದು ಮಾರಿಯಮ್ಮನ ಆಶೀರ್ವಾದ ಪಡೆಯುತ್ತಿದ್ದಾರೆ. ಇಲ್ಲಿಗೆ ಬಂದು ಕಷ್ಟ ಹೇಳಿಕೊಂಡ ಜನರ ಹಲವು ಕಷ್ಟಗಳು ಹರಿಹಾರಗೊಂಡಿದೆ. ಇಲ್ಲಿನ ದೇವಿ ಯಾವ ಕಷ್ಟವನ್ನು ಹೇಳಿದರೂ ಪರಿಹಾರ ಮಾಡುವ ನಂಬಿಕೆಯನ್ನು ಜನರು ಇಟ್ಟುಕೊಂಡಿದ್ದಾರೆ. ಸುನೀಲ್ ಕುಮಾರ್ ಆಡಳಿತದಲ್ಲಿ ಈ ದೇವಸ್ಥಾನವು ಅಭಿವೃದ್ದಿಯಾಗಿದೆ ಎಂದು ದೇವಸ್ಥಾನದ ಮೊಕ್ತೇಸರರು,ಆಡಳಿತ ಮಂಡಳಿ ಸದಸ್ಯರು ಜನರು ಹೇಳಿದ್ದಾರೆ. ಅಲ್ಲದೆ ಮಾರಿಯಮ್ಮನ ವರ್ಷಾವಧಿ ಜಾತ್ರೆಯು ಈ ಬರುವ ಮೇ 16ರಿಂದ ಎರಡು ದಿನ ನಡೆಯಲಿದೆ.