ನ್ಯೂಸ್ ನಾಟೌಟ್ :ಕಾರ್ಕಳ ತಾಲೂಕಿನಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯಿರಬೇಕೆಂಬ ಸದುದ್ದೇಶದಿಂದ ಸುನೀಲ್ ಕುಮಾರ್ ಅವರ ಆಡಳಿತದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಅಭಿವೃದ್ಧಿ ಮಾಡಲಾಯಿತು.ಈ ವೇಳೆ ಐಸಿಯು ವಾರ್ಡ್ ಗೆ 10 ಸುಸಜ್ಜಿತ ಬೆಡ್ ವ್ಯವಸ್ಥೆಯನ್ನೂ ಮಾಡಲಾಯಿತು.
ಬಡರೋಗಿಗಳಿಗೆ ಆಸರೆಯಾಗಬೇಕು ಎಂಬ ದೃಷ್ಟಿಕೋನದಿಂದ ಸೌಲಭ್ಯಗಳಿಗೆ ಪ್ರಾಶಸ್ತ್ಯತೆ ನೀಡಿ ಮಕ್ಕಳ ತುರ್ತು ತಪಾಸಣಾ ಕೇಂದ್ರ ಮಾಡಲಾಗಿದೆ.ತಿಂಗಳಲ್ಲೊಮ್ಮೆ ರಕ್ತದಾನ ಶಿಬಿರ,ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ತಿಳುವಳಿಕೆ ಹೀಗೆ ಹತ್ತು ಹಲವು ಸೌಲಭ್ಯಗಳು ಇಲ್ಲಿವೆ.ತುರ್ತು ಆ್ಯಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಇನ್ನು ಕೋವಿಡ್ ಟೈಮ್ ನಲ್ಲಿ ಹಗಲಿರುಳೆನ್ನದೇ ನಿದ್ದೆಗೆಟ್ಟು ರೋಗಿಗಳ ರಕ್ಷಣೆ, ಕ್ವಾರಂಟೈನ್ ಸಮಯದಲ್ಲಿ ಬೆಡ್ ಗಳ ವ್ಯವಸ್ಥೆ ಮತ್ತು ರೋಗಿಗಳ ಆರೈಕೆಯನ್ನು ಮಾಡಲಾಗಿದೆ.