ನ್ಯೂಸ್ ನಾಟೌಟ್: ಕರೋನಾ ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೆ ತುತ್ತಾಗಿದ್ದಂತಹ ಸಂದರ್ಭದಲ್ಲಿ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಹೊತ್ತುಕೊಂಡು ಜನರ ಬಳಿಗೆ ಬಂದು ಮತ ಯಾಚಿಸುತ್ತಿದೆ? ಐದು ವರ್ಷಕ್ಕೊಮ್ಮೆ ಬರುವ ಕಾಂಗ್ರೆಸ್ ಅನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹಿರ್ಗಾನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಜನರ ಕಷ್ಟ ನಷ್ಟಗಳಿಗೆ ಬಿಜೆಪಿ ನಿರಂತರವಾಗಿ ಸ್ಪಂದಿಸಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿ ಅವರ ಕಷ್ಟಗಳನ್ನು ಪರಿಹರಿಸಿದ್ದೇವೆ. ಪ್ರತಿ ಹಳ್ಳಿಯ ಕಟ್ಟ ಕಡೆಯ ನಿವಾಸಿಯ ಕುಟುಂಬಕ್ಕೆ ಬಿಜೆಪಿ ಸ್ಪಂದಿಸಿದೆ. ಇತರೆ ಸಮಯಗಳಲ್ಲಿ ಸ್ಪಂದಿಸುವುದು ಇದ್ದಿದ್ದೆ ಆದರೆ ಕರೋನಾ ಬಂದು ಜನ ನೋವಿನಲ್ಲಿರುವಾಗ ಅವರ ಬಳಿ ತೆರಳಿ ವೈದ್ಯಕೀಯ ಸೇವೆ ಆರೋಗ್ಯ ಸಮಸ್ಯೆ ಕಿಟ್ ನೀಡಿದ್ದಲ್ಲದೆ ನಾಗರಿಕರ, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದು ಕ್ರಮ ಕೈಗೊಂಡಿದ್ದೇವೆ. ಮುಂಬೈ, ಪೂನಾದಲ್ಲಿರುವ ನಮ್ಮ ಸ್ನೇಹಿತರು ಮರಳಿ ಕ್ಷೇತ್ರಕ್ಕೆ ಬಂದಾಗ ಅವರನ್ನು ಯಾವುದೇ ತೊಂದರೆ ಆಗದಂತೆ ಕ್ವಾರೆಂಟೀನ್ ನಡೆಸಿದ್ದೇವೆ. ಆಗ ಈ ಕಾಂಗ್ರೆಸ್ ನವರು ಎಲ್ಲಿದ್ದರು ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು. ಐದು ವರ್ಷಕ್ಕೊಮ್ಮೆ ಮನೆಗೆ ಬರುವ ಕಾಂಗ್ರಸ್ ತಿರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸಿ ಎಂದು ಸುನಿಲ್ ಕುಮಾರ್ ಮನವಿ ಮಾಡಿದರು.