ನ್ಯೂಸ್ ನಾಟೌಟ್ : ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿಕಾರ್ಕಳ ಸದಾ ಮುಂದುವರಿದ ಪ್ರದೇಶವಾಗಿದೆ. ವಿ ಸುನಿಲ್ ಕುಮಾರ್ ಆಡಳಿತದಲ್ಲಿ ಅಂತರ್ಜಲದ ಅಭಿವೃದ್ಧಗೂ ಗಮನ ನೀಡಲಾಗಿದೆ. ಇದರಿಂದ ಕೃಷಿಕನ ಬದುಕು ಮಾತ್ರವಲ್ಲ ಪರಿಸರವೂ ಹಚ್ಚ ಹಸಿರಾಗಿ ಮೈತೆಳೆದು ನಿಂತಿದೆ.
ಕಾರ್ಕಳದ ಇತಿಹಾಸ ಪ್ರಸಿದ್ಧ ಸಿಗಡಿ ಕೆರೆಯನ್ನು ಸರಕಾರದ ಅನುದಾನವಿಲ್ಲದೆ ಸ್ಥಳೀಯ ಸಮಾನ ಮನಸ್ಕ ತಂಡಗಳ ನೆರವಿನಿಂದ ಹೂಳು ತೆಗೆದು ಜಲಕ್ರಾಂತಿ ಮಾಡಿರುವ ಘಟನೆ ಹಸಿರಾಗಿರುವಾಗಲೇ ಕ್ಷೇತ್ರದ ಪ್ರಮುಖ ಕೆರೆಗಳಿಗೆ ಮತ್ತೆ ಕಾಯಕಲ್ಪ ನೀಡಲಾಗಿದೆ. ಈ ಮೂಲಕ ಕೃಷಿಭೂಮಿಗೆ ಎಂದೂ ಬತ್ತದ ಜಲಧಾರೆ ಹರಿದಿದೆ. ಅಂತರ್ಜಲ ಮಟ್ಟ ಏರಿಕೆಯಾಗಿ ಸುತ್ತಮುತ್ತಲಿನ ಭಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ವಿಶೇಷ.ಸಾಣೂರು ಮಠದ ಕೆರೆ ಅಭಿವೃದ್ಧಿ ಕಾಮಗಾರಿ, ಪಳ್ಳಿ ಖೈರು ಕೆರೆ ಅಭಿವೃದ್ಧಿ , ಹಿರ್ಗಾನ ಹರಿಯಪ್ಪನ ಕೆರೆ ಅಭಿವೃದ್ಧಿ, ಎಳ್ಳಾರೆ ಹೊನ್ನೆಜಡ್ಡು ಕೆರೆ ಅಭಿವೃದ್ಧಿ, ಶಿವಪುರ ತೊರೆಯಾಳು ಪಾಂಜಾರು ಕೆರೆ ಅಭಿವೃದ್ಧಿ, ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದೆ.