ನ್ಯೂಸ್ ನಾಟೌಟ್ : ಮೋದಿ ಜೀ ಪ್ಲೀಸ್ ಏಕ್ ಅಚ್ಚಿ ಸ್ಕೂಲ್ ಬನ್ವಾ ದೋ ನಾ ಎಂದು ಕಾಶ್ಮೀರಿ ಶಾಲಾ ಬಾಲಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಮನವಿ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಬಾಲಕಿ ಸೀರತ್ ನಾಜ್ .
ನಮ್ಮ ಶಾಲೆಗೆ ಸರಿಯಾದ ಕಟ್ಟಡ ವ್ಯವಸ್ಥೆ ಇಲ್ಲದೆ ನಾವೆಲ್ಲರೂ ದುಸ್ಥಿತಿಯಲ್ಲಿರುವ ಕಟ್ಟಡಲ್ಲೇ ಕೂರಬೇಕಾಗಿದೆ ಹಾಗಾಗಿ ದೇಶದ ಪ್ರಧಾನಿಯವರು ನಮಗೆ ಒಂದು ಉತ್ತಮ ಶಾಲೆ ನಿರ್ಮಿಸಿಕೊಟ್ಟು ನಮ್ಮ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾಳೆ. ಬಾಲಕಿ ವಿಡಿಯೋದಲ್ಲಿ ತಮ್ಮ ಶಾಲೆಯ ದುಸ್ಥಿತಿಯನ್ನು ಎಳೆ ಎಳೆಯಾಗಿ ತೋರಿಸಿಕೊಟ್ಟಿದ್ದಾಳೆ.
ಎರಡು ಮುಚ್ಚಿದ ಬಾಗಿಲುಗಳ ಮುಂದೆ ಅವಳು ಪ್ರಾಂಶುಪಾಲರ ಕಚೇರಿ ಮತ್ತು ಸಿಬ್ಬಂದಿ ಕೊಠಡಿ ತೋರಿಸುತ್ತಾಳೆ ನಂತರ ನೆಲ ಎಷ್ಟು ಕೊಳಕಾಗಿದೆ ನೋಡಿ. ನಮ್ಮನ್ನು ಇಲ್ಲಿ ಕೂರಿಸುತ್ತಾರೆ ಎಂದಿದ್ದಾಳೆ. ನಮ್ಮ ಶಾಲೆ ಇರುವ ದೊಡ್ಡ ಕಟ್ಟಡವನ್ನು ನಾನು ನಿಮಗೆ ತೋರಿಸುತ್ತೇನೆ ಎಂದು ಹೇಳುತ್ತಾಳೆ. ಆ ವಿಡಿಯೋದಲ್ಲಿ ಅಪೂರ್ಣಗೊಂಡ ಶಾಲಾ ಕಟ್ಟಡ ಗೋಚರಿಸುತ್ತಿದೆ. ಶಾಲೆಯಲ್ಲಿನ ಸೌಕರ್ಯಗಳ ಕೊರತೆಯ ಬಗ್ಗೆ ಬಾಲಕಿಯ ವೀಡಿಯೊ ಮೂಲಕ ತಿಳಿಸಿದ್ದಾಳೆ.
ವೀಡಿಯೊ ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಇದುವರೆಗೆ 1,16,000 ಲೈಕ್ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.