ನ್ಯೂಸ್ ನಾಟೌಟ್ : ಕೆಲವರು ತಾನೊಬ್ಬ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಚಿಕ್ಕಂದಿನಿಂದಲೇ ಕನಸು ಕಾಣುವವರಿದ್ದಾರೆ.ಅದಕ್ಕೆ ಬೇಕಾದ ತಯಾರಿ ನಡೆಸುವವರು ಇದ್ದಾರೆ.ಇನ್ನೂ ಕೆಲವರಿಗೆ ಆ ಹುದ್ದೆ ಬಯಸದೇ ಬರುವ ಭಾಗ್ಯವೂ ಆಗಿರುತ್ತೆ.ವಿದೇಶಕ್ಕೆ ಹೋಗಿ ಸಾಕಷ್ಟು ಹಣ ಮಾಡುವ ಅವಕಾಶ ಕಣ್ಣ ಮುಂದಿದ್ದರೂ ಅದೆಲ್ಲವನ್ನೂ ತೊರೆದು ಭಾರತದಲ್ಲೇ ಇದ್ದುಕೊಂಡು ಏನಾದರೂ ಸಾಧನೆ ಮಾಡಬೇಕೆಂದು ಬಯಸುವವರೂ ಇದ್ದಾರೆ.ಅಂತಹ ಲಿಸ್ಟ್ ನಲ್ಲಿ ಇಲ್ಲೊಬ್ಬಳು ಸುಂದರಿ ಸೇರಿಕೊಳ್ಳುತ್ತಾಳೆ.
ಹೌದು, ಹೆಸರು ಪೂಜಾ ಯಾದವ್. ಮೂಲತಃ ಹರಿಯಾಣ ಮೂಲದವರು. 1988ರ ಸೆಪ್ಟೆಂಬರ್ 20ರಂದು ಜನಿಸಿದ ಪೂಜಾ ಯಾದವ್ ತನ್ನ ಆರಂಭಿಕ ಶಿಕ್ಷಣವನ್ನು ಹರಿಯಾಣದಲ್ಲಿ ಪಡೆದರು. ಬಯೋಟೆಕ್ನಾಲಜಿ ಮತ್ತು ಫುಡ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಿದರು. ಎಂಟೆಕ್ ನಂತರ ಕೆನಡಾಕ್ಕೆ ಉದ್ಯೋಗವನ್ನರಸಿ ಹೋದರು.ಕೆಲ ವರ್ಷಗಳ ಕಾಲ ಕೆನಡಾದಲ್ಲಿ ಕೆಲಸ ಮಾಡಿದ ನಂತರ ಜರ್ಮನಿಗೆ ಪಯಣ ಬೆಳೆಸಿದರು. ವಿದೇಶಿ ಉದ್ಯೋಗದಲ್ಲಿ ಹಣವಿತ್ತು, ಸೌಲಭ್ಯಗಳಿದ್ದವು. ಆದರೆ ಪೂಜಾಗೆ ಸಮಾಧಾನವಾಗಲಿಲ್ಲ. ಕೆಲಸ ಬಿಟ್ಟು ಮತ್ತೆ ಭಾರತಕ್ಕೆ ಮರಳಿ ತನ್ನ ವೃತ್ತಿಯನ್ನು ಆರಂಭಿಸಿದ್ದಾರೆ.
ಪೂಜಾ ಯಾದವ್ ಭಾರತಕ್ಕೆ ಮರಳಿದ ನಂತರ UPSC ಪರೀಕ್ಷೆಗೆ ತಯಾರಿ ಆರಂಭಿಸಿ ತನ್ನ ಮೊದಲ ಪ್ರಯತ್ನದಲ್ಲಿ ವಿಫಲರಾದರು.ಎರಡನೇ ಪ್ರಯತ್ನದಲ್ಲಿ 174ನೇ ರ್ಯಾಂಕ್ ಗಳಿಸಿ 2018 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇದೀಗ ಇವರು ದೇಶದ ಅತ್ಯಂತ ಸುಂದರ ಆಡಳಿತ ಅಧಿಕಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. 2018ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಗುಜರಾತ್ ಕೇಡರ್ ನ ಅಧಿಕಾರಿಯಾಗಿದ್ದು ವಿಶೇಷ.
ಸ್ವಾಭಿಮಾನಿ ಗುಣವನ್ನು ಹೊಂದಿರುವ ಪೂಜಾ ತಾನು ಓದುವುದಕ್ಕೆ ತಾನೇ ಕೆಲಸ ಮಾಡಿ ಹಣ ವ್ಯಯಿಸಿದ್ದಾರೆ. ಎಂಟೆಕ್ ಓದುತ್ತಿರುವಾಗ ಮತ್ತು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳಿಗೆ ಟ್ಯೂಷನ್ ಕಲಿಸುವುದರೊಂದಿಗೆ ಖರ್ಚನ್ನು ಭರಿಸಲು ಸ್ವಾಗತಕಾರರಾಗಿಯೂ ಕೆಲಸ ಮಾಡುತ್ತಿದ್ದರು ಅನ್ನೊದು ಗಮನಾರ್ಹ ವಿಚಾರ.ಪೂಜಾ ಅವರು ವಿಕಲ್ಪ್ ಭಾರದ್ವಾಜ್ ಅವರನ್ನು 2021 ರಲ್ಲಿ ವರಿಸಿದರು.ಇವರು 2016 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಸಮೀಪದ ರಾಜ್ಯವಾದ ಕೇರಳ ಕೇಡರ್ ನ ಅಧಿಕಾರಿಯಾಗಿದ್ದಾರೆ.