ನ್ಯೂಸ್ ನಾಟೌಟ್: ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ 8 ವರ್ಷದ ಬಾಲಕನನ್ನು ಟ್ರಾನ್ಸ್ಜೆಂಡರ್ ಕೊಲೆ ಮಾಡಿದ ಘಟನೆ ತೆಲಂಗಾಣದ ಹೈದರಾಬಾದ್ನಿಂದ ವರದಿಯಾಗಿದೆ. ಆದರೆ, ಬಾಲಕನ ಹತ್ಯೆಗೆ ನರಬಲಿಯೇ ಕಾರಣ ಎಂಬುದು ಸ್ಥಳೀಯರು ಆರೋಪಿಸಿದ್ದಾರೆ.
ಗುರುವಾರ ರಾತ್ರಿ 8 ವರ್ಷದ ಬಾಲಕ ಆಟವಾಡಲು ಹೋಗಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಐಪಿಸಿಯ ಸೆಕ್ಷನ್ 363 ರ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. “ನಂತರ ಸಿಸಿಟಿವಿಗಳನ್ನು ಸ್ಕ್ಯಾನ್ ಮಾಡಿದ್ದೇವೆ ಮತ್ತು ಮಗು ತೃತೀಯಲಿಂಗಿಯಾಗಿರುವ ಇಮ್ರಾನ್ ಎಂಬುವರಿಗೆ ಸೇರಿದ ನಿವಾಸದೊಳಗೆ ಹೋಗಿರುವುದು ಕಂಡುಬಂದಿದೆ. ಆ ನಂತರ ಹುಡುಗ ಮನೆಯಿಂದ ಹಿಂತಿರುಗಲಿಲ್ಲ. ಆದರೆ, ಆರೋಪಿ ಬಾಲಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಮತ್ತು ಹುಡುಗನ ತಂದೆಯ ನಡುವೆ ಹಣಕಾಸಿನ ವಿವಾದಗಳು ನಡೆದಿತ್ತು ಎನ್ನಲಾಗಿದೆ. ಆರೋಪಿ ಮಗುವಿನ ಶವವನ್ನು ಹೊರಗೆ ಎಸೆದಿದ್ದಾರೆ ಎನ್ನಲಾಗಿದೆ.
ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನರಬಲಿಯಿಂದ ಬಾಲಕನ ಕೊಲೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದರೂ ಪೊಲೀಸರಿಗೆ ನರಬಲಿಗೆ ಸಂಬಂಧಿಸಿದ ಯಾವುದೇ ಸುಳಿವು ಸಿಕ್ಕಿಲ್ಲ. ಆ ಅನುಮಾನದಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.