ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ 29 ವರ್ಷದ ಕಾರು ಚಾಲಕನೊಬ್ಬ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಹತ್ಯೆ ಮಾಡಿರುವ ಅಮಾನಷ ಘಟನೆ ಸಿಕ್ಕಿಂ ನಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಈ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಬಾಲಕಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಪೊಲೀಸರು ಮೃತದೇಹವನ್ನ ಪತ್ತೆ ಮಾಡಿದ್ದು, ಶಾಲೆಯಿಂದ ಮನೆಗೆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರಿನಲ್ಲಿ ಕರೆದೊಯ್ಯುವುದಾಗಿ ಬಾಲಕಿಯನ್ನು ಕರೆದು ಕೂರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಬಳಿಕ ಪೆಟ್ರೋಲ್ ಬಂಕ್ನಲ್ಲಿ ಕಾರು ನಿಲ್ಲಿಸಿ ಆಕೆಗೆ ತಿಂಡಿ ತಿನಸು ಮತ್ತು ಜ್ಯೂಸ್ ಕೊಡಿಸಿದ್ದಾನೆ. ನಂತರ ಪಕ್ಕದ ಅರಣ್ಯಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.
“ನನ್ನ ಮಗಳು ಜೀವ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಆಕೆ ಸಾಯುವ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ. ಅದೇ ಶಿಕ್ಷೆಯನ್ನು ಆರೋಪಿಗೂ ನೀಡಬೇಕು. ನಮ್ಮ ಕೈಗೆ ಆರೋಪಿ ಸಿಕ್ಕಿದಲ್ಲಿ ಅದೇ ರೀತಿ ಆತನಿಗೂ ಚಿತ್ರಹಿಂಸೆ ನೀಡುತ್ತೇವೆ” ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.