ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ಹಾಗೂ ಕಡಬ ಪರಿಸರದಲ್ಲಿ ಭಾರೀ ಮಳೆ ಸುರಿದಿರುವ ಬಗ್ಗೆ ಮಂಗಳವಾರ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿರು ಬಿಸಿಲಿಗೆ ಸಿಲುಕಿ ಕರಾವಳಿ ಜನ ತತ್ತರಿಸಿದ್ದರು.ಕಡಬ, ಸುಳ್ಯ, ಪುತ್ತೂರು, ಮಂಗಳೂರಿನಲ್ಲಿ ಬಿಸಿಲಿನ ಧಗೆ ವಿಪರೀತ ಮಟ್ಟಕ್ಕೆ ಏರಿತ್ತು.ಇದೀಗ ಕಡಬ ಸುಬ್ರಹ್ಮಣ್ಯ ಮಟ್ಟಿಗೆ ನೋಡುವುದಾದರೆ ಜನ ಸ್ವಲ್ಪ ನಿಟ್ಟಿಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ಮಧ್ಯಾಹ್ನ ವರುಣರಾಯ ಸುರಿಯಲಾರಂಭಿಸಿದ.ಇದರಿಂದ ಬಿಸಿಯಿಂದ ಕುದಿಯುತ್ತಿದ್ದ ಸುಬ್ರಹ್ಮಣ್ಯ ಹಾಗೂ ಕಡಬ ಪರಿಸರ ಸಣ್ಣಗೆ ತಂಪಾಯಿತು. ಕಡಬ ತಾಲೂಕಿನ ಸುಬ್ರಹ್ಮಣ್ಯ,ಆಲಂಕಾರು,ನೆಟ್ಟಣ ಸೇರಿ ಇತರೆ ಗ್ರಾಮೀಣ ಪ್ರದೇಶದಲ್ಲಿಯೂ ಮಳೆ ಸುರಿದಿವೆ.ಇತ್ತ ಸುಳ್ಯದಲ್ಲಿಯೂ ಮಧ್ಯಾಹ್ನ ಮಳೆ ಸುರಿದಿದ್ದು,ಸುಳ್ಯ ನಗರ ಸ್ವಲ್ಪ ಮಟ್ಟಿಗೆ ತಂಪಾಯಿತು.ಸುಳ್ಯದಲ್ಲಿ ಬೇಸಿಗೆ ಬಿಸಿ ತಾಪ ಹೆಚ್ಚಿರುವುದರಿಂದ ಜೀವನದಿ ಪಯಸ್ವಿನಿ ಭತ್ತಿ ಹೋಗಿದೆ. ಇದರಿಂದ ಸುಳ್ಯ ನಗರ ಪಂಚಾಯತ್ ಜನರಿಗೆ ನೀರು ಪೂರೈಸುವುದಕ್ಕೆ ಒದ್ದಾಟ ನಡೆಸುತ್ತಿದೆ. ಹಲವಾರು ಜಲಚರಗಳು ಸಾವಿಗೀಡಾಗಿವೆ. ಈ ಬೆನ್ನಲ್ಲೇ ಮಳೆ ಬಂದಿರುವುದಿರಿಂದ ಸಣ್ಣ ಮಟ್ಟಿನ ಭರವಸೆ ಮೂಡಿದಂತಾಗಿದೆ.