ನ್ಯೂಸ್ ನಾಟೌಟ್ : ಸದಾ ಒಂದಿಲ್ಲೊಂದು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ವತಿಯಿಂದ ಇದೀಗ ವಿನೂತನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.ಮಕ್ಕಳಿಗೂ ಬೇಸಿಗೆ ರಜೆಯ ಸಮಯವಾದ್ದರಿಂದ, ಕ್ರಿಯಾತ್ಮಕ ಚಟುವಟಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಯೋಗ ತರಬೇತಿ ಶಿಬಿರ ನಡೆಯುತ್ತಿದೆ.
ಶಿಬಿರವನ್ನು ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಂತಿಕಲ್ಲು ಇದರ ಶಾಖಾ ಮುಖ್ಯಸ್ಥರು ಆದ ಚರಣ್ ದೇರಪ್ಪಜ್ಜನಮನೆ ಉದ್ಘಾಟನೆ ಮಾಡಿದರು.ನಂತರ ಮಾತನಾಡಿದ ಅವರು ‘ಪ್ರಸಕ್ತ ದಿನಗಳಲ್ಲಿ ಸದೃಢ ಅರೋಗ್ಯಕ್ಕಾಗಿ ಯೋಗ ಅನಿವಾರ್ಯ, ಟ್ರಸ್ಟ್ ನ ಸಾಮಾಜಿಕ ಕಾರ್ಯ ಎಂದೆಂದಿಗೂ ಅಮರವಾಗಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಜೇಶ್ವರಿ ಮಲಯಾಳ, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ, ಲೋಕೇಶ್ ಕುಚ್ಚಾಲ,ಕಾರ್ತಿಕ್ ದೇವ,ಹರಿಶ್ಚಂದ್ರ ಕುಳ್ಳಂಪಾಡಿ,ಮುಕುಂದ ಹಿರಿಯಡ್ಕ, ಅಭಿಲಾಶ್, ಯೋಗೀಶ್ ಹೊಸೋಳಿಕೆ,ಜಯರಾಮ್ ಅಡ್ಡನಪಾರೆ, ಸುಧೀರ್ ವಳಲಂಬೆ,ಪ್ರಿತೇಶ್ ಅಚ್ರಪ್ಪಾಡಿ, ತೇಜಕುಮಾರ್ ಚೆಮನ್ನೂರ್ ಯತೀಂದ್ರ ಕೋಡ್ತುಗುಳಿ,ರೇವತಿ ಕಡೋಡಿ, ಶ್ರೀಲತಾ ರೋಹಿತಾಕ್ಷ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.ಯೋಗ ಶಿಕ್ಷಣವನ್ನು ರಾಷ್ಟ್ರಿಯ ಯೋಗ ಪಟು ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ನೀಡುತ್ತಿದ್ದಾರೆ.ನಿರೀಕ್ಷೆಗೂ ಮೀರಿ ಯೋಗ ತರಬೇತಿ ಗೆ ಆಸಕ್ತರು ಭಾಗವಹಿಸಿರುವುದು ವಿಶೇಷವಾಗಿದೆ.