ನ್ಯೂಸ್ ನಾಟೌಟ್:ಚುನಾವಣೆ ಮುಗಿಯುವವರೆಗೂ ಕೊಡಗಿನ ಮದುವೆಗಳಲ್ಲಿ ಮದ್ಯ ಬಳಕೆ ಬೇಡ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದ ಬೆನ್ನಲ್ಲೇ ಕೊಡಗಿನ ಜನರು ಮದ್ಯ ಬಳಕೆಗೆ ಅವಕಾಶ ಕೊಡಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಕೆ ಮಾಡಿದ್ದು, ಖಾಸಗಿ ಸಮಾರಂಭಗಳಲ್ಲಿ ಮಾತ್ರ ಮದ್ಯ ಬಳಕೆಗೆ ಅವಕಾಶ ನೀಡಲಾಗಿದೆ.
ರಾಜಕೀಯ ಪಕ್ಷಗಳ ಕಾರ್ಯಕ್ರಮ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ, ಸಮಾರಂಭದಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ಆಯೋಗ ಹೇಳಿದೆ. ಮದುವೆ, ನಾಮಕರಣ ಮತ್ತುಳಿದ ಖಾಸಗಿ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ಇಲಾಖೆ ಹೇಳಿತ್ತು, ಕೊಡವ, ಗೌಡ ಸಮಾಜದಿಂದ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು.
ಕೊಡವರ ಮದುವೆಗಳಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪೆಗ್ಗು ಹಾಕಿ ಡ್ಯಾನ್ಸ್ ಮಾಡುವುದು ಮಾಮೂಲಿ.ಆದರೆ ಚುನಾವಣಾ ಆಯೋಗ ಇದಕ್ಕೆ ತಕ್ಕ ಮಟ್ಟಿಗೆ ಬ್ರೇಕ್ ಹಾಕಿತ್ತು. ಮದುವೆ, ಸಮಾರಂಭಗಳಲ್ಲಿ ಮದ್ಯಕ್ಕೆ ನಿಷೇಧವೆಂದು ಹೇಳಿತ್ತು. ಇದರಿಂದಾಗಿ ಅಲ್ಲಿನ ಜನ ಬೇಸರ ವ್ಯಕ್ತ ಪಡಿಸಿದ್ದರು. ಮದ್ಯ ಸೇವಿಸಿ ಡಾನ್ಸ್ ಮಾಡುವುದು ನಮ್ಮ ಸಂಪ್ರದಾಯ ಎನ್ನುತ್ತಾ ಕೊಡವ ಸಮಾಜ , ಗೌಡ ಸಮಾಜ ಮನವಿ ಮಾಡಿದ್ದವು. ಮದ್ವೆಗಳಲ್ಲಿ ಮದ್ಯ ಪೂರೈಕೆ ನಿರ್ಬಂಧ ಆದೇಶ ಹಿಂಪಡೆಯುವಂತೆ ಚುನಾವಣಾ ಆಯೋಗ ಮನವಿ ಮಾಡಿದ್ದರು.ಇದೀಗ ನಿರ್ಬಂಧ ಸಡಿಲಿಸಿ ಆದೇಶ ಹೊರಡಿಸಲಾಗಿದೆ.
ಕೊಡಗು ಅಂದ್ರೆ ಆಚಾರ-ವಿಚಾರಗಳು ವಿಭಿನ್ನ. ಸದ್ಯ ಇದೀಗ ವಿವಾಹ ಕಾರ್ಯಕ್ರಮಗಳು ಯಥೇಚ್ಚವಾಗಿ ನಡೆಯುವುದರಿಂದ ಇದೀಗ ಮದ್ವೆಗಳಲ್ಲಿ ಮದ್ಯ ಪಾರ್ಟಿಗೂ ಅವಕಾಶ ಸಿಕ್ಕಿದ್ದು ಕೊಡವರ ಖುಷಿ ಇಮ್ಮಡಿಯಾಗಿದೆ.