ನ್ಯೂಸ್ನಾಟೌಟ್: ಚಿನ್ನದ ಬೆಲೆಯಲ್ಲಿ ಬುಧವಾರ 230 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ದರದಲ್ಲಿ 230 ರೂ.ಹೆಚ್ಚಳವಾಗಿದ್ದು, 61,200 ರೂ.ಗೆ ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 200 ರೂ. ಏರಿಕೆಯಾಗಿದ್ದು, 56,100 ರೂ.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 81,000 ರೂ.ಗೆ ಹೆಚ್ಚಳವಾಗಿದೆ.
ಚಿನ್ನದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ 68,000 ರೂಪಾಯಿಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂಪಾಯಿಗೆ ಹೆಚ್ಚಳವಾಗಲಿದೆ. ೫೦೦