ನ್ಯೂಸ್ ನಾಟೌಟ್:ಉಪ್ಪಿನಂಗಡಿಯ ಬೃಹತ್ ಬಟ್ಟೆ ಮಳಿಗೆ ವಿವಾ ಫ್ಯಾಶನ್ ಗೆ ಬೆಂಕಿ ತಗುಲಿ ವ್ಯಾಪಕವಾಗಿ ಹೊತ್ತಿ ಉರಿದ ಘಟನೆ ಮಂಗಳವಾರ ನಡೆದಿದೆ.
ಬಹು ಅಂತಸ್ತಿನ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯಲ್ಲಿ ವಿವಾ ಫ್ಯಾಶನ್ ಬಟ್ಟೆ ಶೋರೂಂ ಇದ್ದು, ಬೆಳಗ್ಗೆ ಇದರೊಳಗಿನಿಂದ ಹೊಗೆ ಬರುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ ಎಂದು ವರದಿ ತಿಳಿಸಿದೆ.
ಇದನ್ನು ಸ್ಥಳೀಯರು ಗಮನಿಸಿ ಪರಿಶೀಲನೆ ಮಾಡಿದಾಗ ಬೆಂಕಿ ಹೊತ್ತಿಕೊಂಡದ್ದು ತಿಳಿದಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳೂ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ.