ನ್ಯೂಸ್ ನಾಟೌಟ್ : ಬೆಂಕಿ ಅವಘಡಕ್ಕೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಮಾರುಕಟ್ಟೆಯಲ್ಲಿ ಬುಧವಾರ ಮುಂಜಾನೆ 100 ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಲುಬೇರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಗೈಲ್ನಲ್ಲಿರುವ ಲುಡ್ಲೋ ಬಜಾರ್ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ವೇಗವಾಗಿ ಹರಡಿದ ಬೆಂಕಿ 100 ಕ್ಕೂ ಹೆಚ್ಚು ಅಂಗಡಿಗಳನ್ನು ನಾಶಪಡಿಸಿದ್ದು, ಅವುಗಳಲ್ಲಿ ಹಲವು ತಾತ್ಕಾಲಿಕ ವ್ಯಾಪಾರಿ ಶೆಡ್ಡ್ ಗಳಾಗಿತ್ತು ಎನ್ನಲಾಗಿದೆ. ಹತ್ತು ಅಗ್ನಿಶಾಮಕ ಯಂತ್ರಗಳು ನಾಲ್ಕು ಗಂಟೆಗಳ ಕಾಲ ಹೋರಾಟದ ನಂತರ ಬೆಂಕಿಯನ್ನು ಹತೋಟಿಗೆ ತಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.