ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯಲ್ಲಿ 32 ವರ್ಷದ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ. ತನ್ನ ಬಾಸ್ನ ಆದೇಶದ ಮೇರೆಗೆ ವ್ಯಕ್ತಿಯನ್ನು ಕೊಂದು ಆತನ ದೇಹವನ್ನು ಸರ್ಕಾರಿ ಆಸ್ಪತ್ರೆಯ ಹೊರಗೆ ಎಸೆಯಲಾಗಿದೆ ಎಂದು ಗುರುವಾರ ವರದಿಗಳು ಹೇಳಿವೆ.
ಘಟನೆಯ ವಿಡಿಯೋ ಹೊರಬಿದ್ದಿದ್ದು, ಮೃತ ಶಿವಂ ಅವರನ್ನು ಕಂಬಕ್ಕೆ ಕಟ್ಟಿಹಾಕಿ ವ್ಯಕ್ತಿಯೊಬ್ಬ ರಾಡ್ನಿಂದ ಹೊಡೆದಿದ್ದರಿಂದ ನೋವಿನಿಂದ ಒದ್ದಾಡುತ್ತಿದ್ದ ದೃಶ್ಯ ಕಾಣುತ್ತಿದೆ. ವಿದ್ಯುತ್ ಆಘಾತದಿಂದ ಶಿವಂ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಆದರೆ ತನಿಖೆಯ ವೇಳೆ ಅಸಹಜ ಗಾಯದ ಗುರುತುಗಳು ದೇಹದಲ್ಲಿ ಪತ್ತೆಯಾಗಿವೆ.
ಈ ನಡುವೆ ಶಿವಂ ಅವರ ತಂದೆ ಅಧೀರ್ ಜೋಹ್ರಿ ಅವರು ಕನ್ಹಯ್ಯಾ ಹೊಸೈರಿ ಮಾಲೀಕ ನೀರಜ್ ಗುಪ್ತಾ ಮತ್ತು ಸೂರಿ ಟ್ರಾನ್ಸ್ಪೋರ್ಟ್ ಕಂಪನಿಯ ಮಾಲೀಕ ಬಂಕಿಮ್ ಸೂರಿ ಸೇರಿದಂತೆ 7 ಜನರ ವಿರುದ್ಧ ಠಾಣಾ ಸದರ್ ಬಜಾರ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹತ್ಯೆಯಾದ ವ್ಯಕ್ತಿ ಆಫೀಸ್ ನಲ್ಲಿ ಬಟ್ಟೆ ಕದ್ದಿದ್ದಾರೆ ಎಂದು ಆರೋಪಿಸಲಾಗಿತ್ತು, ಕಳ್ಳತನವನ್ನು ಕಾಗದದ ಮೇಲೆ ಬರೆದು ಒಪ್ಪಿಕೊಳ್ಳುವಂತೆ ಅವರು ಒತ್ತಾಯಿಸಿದರು, ಆದರೆ ಅದಕ್ಕೆ ನಿರಾಕರಿಸಿದಾಗ, ಅವರ ಮಗನನ್ನು ಹೊಡೆದು ಕೊಂದರು” ಎಂದು ಶಿವಂ ತಂದೆ ಹೇಳಿದ್ದಾರೆ.
ತನಿಖೆಯ ವೇಳೆ ಶಿವಂ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಅವರೊಂದಿಗೆ ಕಳೆದ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ, ಒಂದು ಪ್ಯಾಕೇಜ್ ಕಾಣೆಯಾಗಿದೆ, ನಂತರ ಶಿವಂ ಸೇರಿದಂತೆ ಹಲವಾರು ಸಾರಿಗೆ ನೌಕರರನ್ನು ಥಳಿಸಲಾಗಿದೆ.
ಶಿವಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.