ನ್ಯೂಸ್ ನಾಟೌಟ್: ಕಾರ್ಕಳದಲ್ಲಿ ಬೃಹತ್ ಜವುಳಿ ಉದ್ಯಮ ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಕೈಮಗ್ಗ ಮತ್ತು ಜವುಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ಬೃಹತ್ ಉದ್ಯೋಗ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ನಿಟ್ಟೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ 15 ಎಕರೆ ಭೂಮಿಯಲ್ಲಿ ಕೆಲಸ ಆರಂಭವಾಗಿದೆ. ವಿ ಸುನಿಲ್ ಕುಮಾರ್ ಅವರ ಕನಸಿನಲ್ಲಿ ಇದು ಕೂಡ ಒಂದು ಅನ್ನುವುದು ವಿಶೇಷ.
ಇತ್ತೀಚೆಗೆ ಈ ಉದ್ಯಾನವನದ ಶಂಕುಸ್ಥಾಪನೆ ಮಾಡಲಾಗಿದೆ. ಸುಮಾರು ಏಳು ತಿಂಗಳಲ್ಲಿಉದ್ಯಾನವನ ಅಸ್ತಿತ್ವಕ್ಕೆ ಬರಲಿದೆ. ಅಂದಾಜು ರೂ. 20 ಕೋಟಿ ಮತ್ತು ಇದು ಸ್ಥಳೀಯ ಜನರಿಗೆ ಉತ್ತಮ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಎಸ್ಎಸ್ಎಲ್ ಸಿ ಹಾಗೂ ಕೆಲಸವಿಲ್ಲದೆ ಇರುವ ಯುವ ಜನತೆಯನ್ನು ಪ್ರೋತ್ಸಾಹಿಸಿ ಅವರ ಬದುಕಿಗೊಂದು ದಾರಿ ಮಾಡಿ ಕೊಡುವ ನಿಟ್ಟಿನಲ್ಲಿ ಹೊಸ ಜವುಳಿ ಪಾರ್ಕ್ ಅನ್ನು ನಿರ್ಮಾಣ ಮಾಡಿಕೊಡುತ್ತಿರುವುದು ವಿಶೇಷವಾಗಿದೆ. 15 ಎಕರೆ ವಿಸ್ತರ್ಣದ ಜವಳಿ ಪಾರ್ಕ್ ನಲ್ಲಿ ನೂಲು ತಯಾರಿಕಾ ಘಟಕದಿಂದ ಸಿದ್ದ ಉಡುಪುಗಳನ್ನು ಮಾಡಲಾಗುತ್ತದೆ. ಎಲ್ಲವೂ ಇಲ್ಲಿಂದಲೇ ಸಿದ್ಧವಾಗುತ್ತದೆ. 50,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಕನಸನ್ನು ಹೊಂದಲಾಗಿದೆ.