ನ್ಯೂಸ್ ನಾಟೌಟ್: ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ‘ನೋ ಬಾಲ್’ ಸಿಗ್ನಲ್ ಪ್ರದರ್ಶಿಸಿದ ಕಾರಣಕ್ಕೆ ಕ್ರಿಕೆಟ್ ಅಂಪೈರ್ ನನ್ನೇ ಕೊಂದ ಘಟನೆ ಭಾನುವಾರ ಒಡಿಶಾದ ಕಟಕ್ನಿಂದ ಈ ಘಟನೆ ವರದಿಯಾಗಿದೆ.
ವಿವರಗಳ ಪ್ರಕಾರ, ಮೃತ ಅಂಪೈರ್ 22 ವರ್ಷದ ಲಕ್ಕಿ ರಾವುತ್ ಎಂದು ಗುರುತಿಸಲಾಗಿದ್ದು, ‘ನೋ ಬಾಲ್’ ಸಿಗ್ನಲ್ ಅಂಪೈರ್ ನಿರ್ಧಾರದ ಕುರಿತು ಜಗಳವಾಗಿ ಸ್ಮೃತಿ ರಂಜನ್ ರೌತ್ ಎಂಬಾತ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ವರದಿ ತಿಳಿಸಿದೆ. ನಂತರ ಆರೋಪಿಯನ್ನು ಮೈದಾನದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಮಧ್ಯೆ ತೀವ್ರವಾಗಿ ಗಾಯಗೊಂಡಿದ್ದ ಅಂಪೈರ್ ನನ್ನು ಸಿಬಿ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರನ್ನು ಸಾವನ್ನಪ್ಪಿದ್ದಾರೆ ಎಂದು ದೃಢೀಕರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಪಂದ್ಯವು ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವಿನ ಪಂದ್ಯಾವಳಿಯಾಗಿತ್ತು ಎಂದು ವರದಿಗಳು ತಿಳಿಸಿವೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಎಫ್ ಐ ಆರ್ ದಾಖಲಿಸಲಾಗಿದೆ.