ನ್ಯೂಸ್ ನಾಟೌಟ್ : ಕಾರ್ಕಳದ ಅಭಿವೃದ್ಧಿ ಕೆಲಸಗಳು ಹಲವಾರು ವ್ಯಾವಹಾರಿಕ ಕೊಂಡಿಗಳನ್ನು ತೆರೆದಿಟ್ಟಿದೆ. ಬಜಗೋಳಿ-ಬೆಳ್ಮಣ್, ಮುಂಡ್ಕೂರು ನೂತನ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ಷೇತ್ರದಲ್ಲಿ ವ್ಯಾಪಾರ-ವ್ಯವಹಾರ ಉದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕತೆಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಪ್ರಗತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸುಸಜ್ಜಿತ ಮಾರುಕಟ್ಟೆ ಕೇಂದ್ರವನ್ನು ನಿರ್ಮಿಸಲಾಗಿದೆ.
ಸುನಿಲ್ ಕುಮಾರ್ ಕ್ಷೇತ್ರದಲ್ಲಿಇದು ಒಂದು ಕಡೆಯಾದರೆ ಮತ್ತೊಂದು ಕಡೆ ಸರಕಾರಿ ಕಟ್ಟಡಗಳ ನವೀಕರಣವನ್ನು ಮಾಡಲಾಗಿದೆ. ಹಳೆಯ ಸರಕಾರಿ ಕಟ್ಟಡಗಳ ನವೀಕರಣವೂ ಅಭಿವೃದ್ಧಿಯ ಭಾಗವೇ ಆಗಿದೆ. ಕೋರ್ಟ್ ಸಂಕೀರ್ಣ ಸೇರಿದಂತೆ ಕ್ಷೇತ್ರದಾದ್ಯಂತ ಸರಕಾರಿ ಕಟ್ಟಡಗಳ ನವೀಕರಣದ ಮೂಲಕ ಜನಸ್ನೇಹಿ ಆಡಳಿತ ನೀಡುವುದಕ್ಕೆ ಕ್ರಮ ವಹಿಸಲಾಗಿದೆ. ಈ ಕಾಲದ ಅಗತ್ಯಕ್ಕೆ ತಕ್ಕಂತೆ ಸರಕಾರಿ ಸೌಧಗಳಿಗೆ ಹೊಸತನವನ್ನು ನೀಡಲಾಗಿದೆ. ಕಾರ್ಕಳದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ, ಗ್ರಾಹಕರಿಗೆ ತ್ವರಿತ ಸೇವೆ, ಪರಿವರ್ತಕ ಟಿಸಿಗಳಿಗೆ ತಕ್ಷಣ ಅನುಮೋದನೆ, ಅಗತ್ಯ ಆಧರಿಸಿ ಟಿಸಿ ಅಳವಡಿಕೆ, ಆರ್ಡಿಎಸ್ಎಸ್ ಯೋಜನೆ ಅನ್ವಯ ಕ್ಷೇತ್ರಕ್ಕೆ 110 ಕೋಟಿ ರೂ. ಪ್ರಸ್ತಾವನ್ನೆಯನ್ನು ಸಲ್ಲಿಕೆಯಾಗಿದೆ.