ನ್ಯೂಸ್ ನಾಟೌಟ್ : ಬಾಲಿವುಡ್ ನ ಮೋಹಕ ತಾರೆ,ಕರಾವಳಿ ಬೆಡಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್ 20ರಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.
ಪತಿ ಅಭಿಷೇಕ್ ಜತೆಗಿನ ಸೆಲ್ಫಿ ಹಂಚಿಕೊಂಡು ಐಶ್ವರ್ಯಾ ರೈ ಅವರು “ಸ್ವೀಟ್ 16” ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗೆ ಅವರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.2007 ಏಪ್ರಿಲ್ 20ರಂದು ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಅಭಿಷೇಕ್ ಮತ್ತು ಐಶ್ವರ್ಯಾ ಜೋಡಿ ಕಾಲಿಟ್ಟಿದ್ದರು.ಮದುವೆಯಾಗಿ ೫ ವರ್ಷಗಳ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದಳು.
https://www.instagram.com/p/CrQ9XiayY8E/?utm_source=ig_web_copy_link