ನ್ಯೂಸ್ ನಾಟೌಟ್ : ಬಹು ನಿರೀಕ್ಷಿತ ಕರ್ನಾಟಕ ವಿಧಾನ ಸಭಾ ಚುನಾವಣೆಯ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಹಲವರಿಗೆ ಖುಷಿ ಇನ್ನೂ ಕೆಲವರಿಗೆ ನಿರಾಸೆ ಬರ ಸಿಡಿಲಿನಂತೆ ಬಂದಪ್ಪಳಿಸಿದೆ.
ಹಿರಿಯರಿಗೆ ಕೊಕ್ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡಿದ್ದವು. ಇದೀಗ ಎಲ್ಲ ಗೊಂದಲಗಳಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ. ಬಹು ನಿರೀಕ್ಷಿತ ಪುತ್ತೂರು ಕ್ಷೇತ್ರಕ್ಕೆ ಪುತ್ತೂರಿಗೆ ಆಶಾ ತಿಮ್ಮಪ್ಪ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ್ದಾರೆ. ಹಾಗೂ ಸುಳ್ಯ ಕ್ಷೇತ್ರಕ್ಕೆ ಭಾಗೀರಥಿ ಮುರುಳ್ಯ ಹೆಸರನ್ನು ಘೋಷಿಸಲಾಗಿದೆ. ಉಳಿದಂತೆ ಬೆಳ್ತಂಗಡಿ ಕ್ಷೇತ್ರಕ್ಕೆ ಹರೀಶ್ ಪೂಂಜಾ, ಉಡುಪಿಗೆ ಯಶ್ ಪಾಲ್ ಸುವರ್ಣ, ಬಂಟ್ವಾಳ ರಾಜೇಶ್ ನಾಯ್ಕ್, ಮೂಡುಬಿದಿರೆ ಉಮಾನಾಥ್ ಕೋಟ್ಯಾನ್ , ಉಳ್ಳಾಲ ಸತೀಶ್ ಕುಂಪಲ, ಮಂಗಳೂರು ಉತ್ತರ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಉಮಾನಾಥ್ ಕೋಟ್ಯಾನ್ , ಕುಂದಾಪುರಕ್ಕೆ ಕಿರಣ್ ಕುಮಾರ್ , ಕಾರ್ಕಳಕ್ಕೆ ಸುನೀಲ್ ಕುಮಾರ್ ಹೆಸರು ಘೋಷಣೆಯಾಗಿದೆ. ೧೮೯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿತ್ತು. ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಯಿತು. ಪುತ್ತೂರು ಹಾಗೂ ಸುಳ್ಯದ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಶಾ ನೇತೃತ್ವದ ಬಿಜೆಪಿ ಸಮಿತಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿದೆ. ಐವತ್ತೆರಡು ಹೊಸ ಮುಖಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದು ವಿಶೇಷವಾಗಿದೆ. 16 ಮಂದಿ ಎಸ್ ಟಿ, 32 ಒಬಿಸಿ ಅಭ್ಯರ್ಥಿಗಳಿಗೆ ಸ್ಥಾನ ನೀಡಲಾಗಿದೆ.