ನ್ಯೂಸ್ ನಾಟೌಟ್:ಮೇ 10ರಂದು ನಡೆಯಲಿರುವ ಚುನಾವಣೆಗಾಗಿ ಭರ್ಜರಿ ತಯಾರಿಗಳು ನಡಿತಿವೆ.ಒಂದೆಡೆ ಚುನಾವಣಾ ದಿನಾಂಕವೂ ಸಮೀಪಿಸುತ್ತಿದೆ.ಈ ಹಿನ್ನಲೆ ಪುತ್ತೂರಿನಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಇಂದು ಕೌಡಿಚಾರ್ ಗೆ ತೆರಳಿ ಬಿರುಸಿನ ಚುನಾವಣಾ ಪ್ರಚಾರವನ್ನು ಮಾಡಿದರು.
ನಾನು ಶಾಸಕನಾದರೆ ಹಿಂದುವಾಗಿದ್ದು ಕೊಂಡೆ ಎಲ್ಲ ಧರ್ಮದವರಿಗೂ ಸಹಾಯ ಮಾಡುತ್ತೇನೆ.ಅಶೋಕ ರೈಮಾಡಿದ ಎಲ್ಲಾ ಒಳ್ಳೆಯ ಕಾರ್ಯಗಳು ಜನಮಾನಸಕ್ಕೆ ತಲುಪಬೇಕು ಎಂದು ಹೇಳಿದರು.ನಾನು ಯಾರಿಗೂ ಬುದ್ದಿ ಕಲಿಸುತ್ತೇನೆ ಎಂದಿಲ್ಲ.ಬದಲಾಗಿ ಭ್ರಷ್ಟಾಚಾರ ಮಾಡಿದವರಿಗೆ ಬುದ್ದಿ ಕಲಿಸುತ್ತೇನೆ ಎಂದಿದ್ದೆ ಎಂದು ಅವರು ಹೇಳಿದರು.ಈ ವೇಳೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿದ್ದರು.