ನ್ಯೂಸ್ ನಾಟೌಟ್: ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ 47ನೇ ನ್ಯಾಶನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಅರಂತೋಡಿನ ರಮ್ಯ ಪವನ್ ಭಾಗವಹಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಾ.27 ರಿಂದ ಮಾ.30 ವರೆಗೆ ನಡೆದ 47ನೇ ನ್ಯಾಶನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಅರಂತೋಡು ಗ್ರಾಮದ ಉಳುವಾರು ಎಳ್ಪಕಜೆಯ ರಮ್ಯ ಪವನ್ ರವರು 30ರ ವಯೋಮಾನದ ಶಾಟ್ ಪುಟ್ ಮತ್ತು ಹೇಮರ್ ತ್ರೋ ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಎರಡು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಅರಂತೋಡು ಉಳುವಾರು ಎಳ್ಪಕಜೆ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ಪವನ್ ಕೆ.ಎಸ್ ರವರ ಪತ್ನಿಯಾಗಿರುತ್ತಾರೆ.