ನ್ಯೂಸ್ನಾಟೌಟ್: ಮೃತದೇಹಗಳು ಆಕ್ವಾಸ್ನ್ ಬಳಿಯ ನದಿ ದಂಡೆಯ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದವು. ಈ ಪೈಕಿ ಮತ್ತೊಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ.
ಕೆನಡಾ ಗಡಿ ಮೂಲಕ ಕಾನೂನು ಬಾಹಿರವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ ಮೃತಪಟ್ಟವರ ಒಟ್ಟು ಸಂಖ್ಯೆ ಎಂಟಕ್ಕೇರಿದೆ. ಮೃತರ ಪೈಕಿ ಭಾರತೀಯ ಕುಟುಂಬವೊಂದರ ಸದಸ್ಯರೂ ಸೇರಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.
ಮೃತರು ಭಾರತ ಹಾಗೂ ರೊಮಾನಿಯಾ ಮೂಲದ ಎರಡು ಕುಟುಂಬಗಳಿಗೆ ಸೇರಿದವರು ಎಂದು ನಂಬಲಾಗಿದ್ದು, ಕೆನಡಾ ಗಡಿ ಮೂಲಕ ಅಮೆರಿಕಾ ಪ್ರವೇಶಿಸಲು ಪ್ರಯತ್ನಿಸುವಾಗ ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಮೂರು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳು ಎಂದು ತಿಳಿದು ಬಂದಿದೆ.
ಗಡಿಯನ್ನು ದಾಟಲು ಪ್ರಯತ್ನಿಸಿ ಮೃತಪಟ್ಟಿರುವ ವ್ಯಕ್ತಿಗಳ ಕುರಿತು ಪ್ರತಿಕ್ರಿಯಿಸಿರುವ ಕೆನಡಾದ ಪೊಲೀಸ್ ಮುಖ್ಯಸ್ಥ ಶಾನ್ ಡುಲೂಡ್, “ದುರದೃಷ್ಟವಶಾತ್ ಇಂತಹ ಘಟನೆಗಳು ಸಂಭವಿಸುತ್ತವೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.