ನ್ಯೂಸ್ ನಾಟೌಟ್: ವಿಮರ್ಶಕರು ಹಲವು ಬಗೆಯಲ್ಲಿ ನಟ-ನಟಿಯರನ್ನು ಹೊಗಳಿ- ತೆಗಳುವುದು ಸಹಜ, ಆದರೆ ಸಿನಿಮಾ ನಿರ್ಮಾಪಕರೊಬ್ಬರು ನಟಿ ಸಮಂತಾ ಬಗ್ಗೆ ವೈಯಕ್ತಿಕವಾಗಿಯೂ ವಾಗ್ದಾಳಿ ನಡೆಸಿದ್ದಾರೆ. ಸಮಂತಾ ಅಭಿನಯದ ʼ ಶಾಕುಂತಲಂʼ ಸಿನಿಮಾ ರಿಲೀಸ್ ಆಗಿದೆ. ಶಾಕುಂತಲಾ ಮತ್ತು ರಾಜ ದುಶ್ಯಂತ್ ಕಥೆಯ ಸಿನಿಮಾ 60 ಕೋಟಿ. ರೂ ನಿರ್ಮಾಣದಲ್ಲಿ ತಯಾರಾಗಿದೆ. ಆದರೆ ಸಿನಿಮಾ ಇದುವರೆಗೆ ಗಳಿಸಿದ್ದು ಬರೀ 10 ಕೋಟಿ ರೂ. ಅಂದುಕೊಂಡ ಮಟ್ಟದಲ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಕಾಣುತ್ತಿಲ್ಲ.
ಸಮಂತಾ ಅಭಿಮಾನಿಗಳಿಗಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಸಿನಿಮಾ ವಿಮರ್ಶಕರು ವಿಶ್ಲೇಷಿಸಿದ್ದಾರೆ. ನಿರ್ಮಾಪಕರೊಬ್ಬರು ಸಮಂತಾ ಅವರ ಮೇಲೆ ಮುಗಿಬಿದ್ದು, ಅವರನ್ನು ಟೀಕಿಸಿದ್ದಾರೆ. ಆನ್ಲೈನ್ ಮೀಡಿಯಾವೊಂದರಲ್ಲಿ ಮಾತನಾಡಿರುವ ಚಿಟ್ಟಿ ಬಾಬು ಎಂಬ ನಿರ್ಮಾಪಕ “ಸಮಂತಾಳ ಸಿನಿಮಾ ಕೆರಿಯರ್ ಮುಗಿಯಿತು. ಅವರು ವಿಚ್ಛೇದನದ ಬಳಿಕ ಪುಷ್ಪ ಸಿನಿಮಾದ ʼ ಊ ಅಂಟವಾʼ ಹಾಡನ್ನು ಮಾಡಿದರು, ಅದರಿಂದ ಬರುವ ಹಣ ಅವರ ಜೀವನ ನಿಭಾಯಿಸಲು ಬೇಕಿತ್ತು. ಅದಕ್ಕಾಗಿ ಆ ಹಾಡನ್ನು ಮಾಡಿದರು. ಅವರು ತಮ್ಮ ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತಾ ಇದ್ದಾರೆ. ಅವರ ಕೆರಿಯರ್ ಮುಗಿಯಿತು ಅವರು ಮತ್ತೆ ಸ್ಟಾರ್ ನಟಿಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ಪ್ರಚಾರದ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಬರೀ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಗೆಲಲ್ಲು ಆಗುವುದಿಲ್ಲ. ಯಶೋದಾ ಸಿನಿಮಾದ ಪ್ರಚಾರದ ವೇಳೆ ಎಮೋಷನಲ್ ಆದರು. ಈಗ ಈ ಸಿನಿಮಾದ ಪ್ರಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಸಾಯವ ಮುನ್ನ ಈ ಪಾತ್ರವನ್ನು ಮಾಡಬೇಕೆಂದಿದ್ದೆ ಎಂದು ಹೇಳಿ ಸಹಾನುಭೂತಿಯನ್ನು ಪಡೆಯಲು ಯತ್ನಿಸಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸೆಂಟಿಮೆಂಟ್ ನಿಂದ ಗೆಲ್ಲಲು ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡುತ್ತಾರೆ. ಈ ರೀತಿಯ ನಾಟಕ ಮಾಡುವುದು ಸರಿಯಲ್ಲ. ಹೀರೋಯಿನ್ ಪಟ್ಟವನ್ನು ಕಳೆದುಕೊಂಡ ಆಕೆ ʼಶಾಕುಂತಲಂʼ ಪಾತ್ರಕ್ಕೆ ಹೇಗೆ ಹೊಂದಿಕೊಂಡರು ಎನ್ನುವುದೇ ಅಚ್ಚರಿ” ಎಂದಿದ್ದಾರೆ. ನಿರ್ಮಾಪಕ ಸಮಂತಾ ಅವರ ಬಗ್ಗೆ ಹೇಳಿರುವ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.