ನ್ಯೂಸ್ ನಾಟೌಟ್: ಬೆಂಗಳೂರು ಮೂಲದ ಅರುಣ್ ಎಂಬವರು ಅಬುಧಾಬಿಯ ಲಾಟರಿ ಟಿಕೇಟ್ ಖರೀದಿಸಿ ಬರೋಬರಿ 44 ಕೋಟಿ ರೂ. ಗೆದ್ದಿದ್ದರು ಆದರೆ ಆ ಕುರಿತು ಬಂದ ಕರೆಯನ್ನು ನಂಬಲಾಗದೆ ಫೋನ್ ನಂಬರ್ ಬ್ಲಾಕ್ ಮಾಡಿದ ಘಟನೆ ಎಪ್ರಿಲ್ ೪ ರಂದು ನಡೆದಿದೆ ಎಂದು ವರದಿ ತಿಳಿಸಿದೆ.
ಅಬುಧಾಬಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಲಾಟರಿ ಫಲಿತಾಂಶ ಪ್ರಕಟಣೆ ಕಾರ್ಯಕ್ರಮವು ಬಿಗ್ ಟಿಕೆಟ್ ಲೈವ್ ಶೋದಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಬೆಂಗಳೂರಿನ ವ್ಯಕ್ತಿ ಅರುಣ್ ಕುಮಾರ್ ಎಂಬವರು 20 ಮಿಲಿಯಾನ್ ದಿಹ್ರಾಮ್ ಅಂದರೆ ಸುಮಾರು 44,75,00,000 ರೂಪಾಯಿ ಗೆದ್ದಿದ್ದಾರೆ. ನೇರಪ್ರಸಾದ ಶೋದಲ್ಲಿ ವಿಜೇತರ ಹೆಸರು ಘೋಷಿಸಲಾಗಿತ್ತು, ಅದರಲ್ಲಿ ಈ ಸಲ ಅರುಣ್ ಕುಮಾರ್ ಗೆದ್ದಿರುವುದಾಗಿ ತಿಳಿಸಿದರು.
ಇವರ ಸ್ನೇಹಿತರಿಂದ ಅಬುಧಾಬಿ ಬಿಗ್ ಟಿಕೆಟ್ ಬಗ್ಗೆ ತಿಳಿದ ಇವರು ಆನ್ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದರು. ಮಾರ್ಚ್ 22 ರಂದು ಬಿಗ್ ಟಿಕೆಟ್ ಖರೀದಿಸಿ ಏಪ್ರಿಲ್ 4ರಂದು ವಿಜೇತರಾದರು. ನೇರಪ್ರಾಸರ ಕಾರ್ಯಕ್ರಮದ ನಿರೂಪಕರು ಅರುಣ್ ಅವರಿಗೆ ಕರೆಮಾಡಿ ,ಗೆದ್ದ ವಿಷಯವನ್ನು ತಿಳಿಸಿದ್ದರು.
ಅವರ ಮೊಬೈಲ್ ನಂಬರಿಗೆ ಕರೆಮಾಡಿ ಗೆದ್ದ ವಿಷಯ ತಿಳಿಸಿದಾಗ ಅವರು ಅಷ್ಟೋಂದು ತಲೆಕೆಡಿಸಿರಲಿಲ್ಲ. ಲೈವ್ ಶೋ ಕೂಡ ನೋಡಿರಲಿಲ್ಲ. ಇಷ್ಟಾದ ಮೇಲೆ ಪೋನ್ ಕರೆ ಬಂದು ‘ನೀವು 20 ಮಿಲಿಯಾನ್ ದಿಹ್ರಾಮ್ ಗೆದ್ದಿದ್ದೀರಿ’ ಎಂದು ಹೇಳಿದ್ದರು. ಅವರು ನಂಬಲು ಸಿದ್ದರಿರಲಿಲ್ಲ. ಕೂಡಲೇ ಆ ಕರೆ ನಿರಾಕರಿಸಿದ್ದಲ್ಲದೆ ಆ ನಂಬರ್ರನ್ನು ಬ್ಲಾಕ್ ಮಾಡಿದ್ದರಂತೆ. ನಂತರ ಬೇರೆ ನಂಬರ್ನಿಂದ ಕರೆ ಮಾಡಿ ವಿಷಯ ತಿಳಿಸಿದಾಗಲೇ ಖಚಿತವಾಯಿತು ಎಂದು ಹೇಳಿಕೊಂಡಿದ್ದಾರೆ.