ನ್ಯೂಸ್ ನಾಟೌಟ್ :ಗುಜರಾತ್ ನಲ್ಲಿ ಇತ್ತೀಚೆಗಷ್ಟೇ ಯುತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು.ಮತ್ತೊಬ್ಬಳು ಯುವತಿ ಭಗವಾನ್ ಶ್ರೀಕೃಷ್ಣನ ಮೂರ್ತಿಯೊಂದಿಗೆ ವಿವಾಹವಾಗಿದ್ದಳು.ಇದೀಗ ಇಲ್ಲೊಬ್ಬಳು ಯುವತಿ ಅದಕ್ಕಿಂತಲೂ ಮುಂದುವರಿದು ತನ್ನನ್ನು ತಾನು ಮದುವೆಯಾಗಿದ್ದಲ್ಲದೇ 24 ಗಂಟೆಯೊಳಗೆ ವಿಚ್ಛೇದನವನ್ನೂ ನೀಡಿರುವ ಘಟನೆ ನಡೆದಿದೆ.
ಮೊದಲೇ ಕೆಲ ಯುವಕರು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ.ದೇವರ ಮೊರೆಹೋಗುತ್ತಿದ್ದಾರೆ. ಯುವತಿಯರು ಈ ನಿರ್ಧಾರ ತೆಗೆದುಕೊಂಡರೆ ಮದುವೆಯಾಗಲು ಸಿದ್ದವಾಗಿರುವ ಯುವಕರ ಪಾಡೇನು? ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಮದುವೆ ಎಂದರೆ ಅಲ್ಲಿ ವಧು-ವರರಿರಬೇಕು. ಮಾತ್ರವಲ್ಲ ಕುಟುಂಬಸ್ಥರು,ಬಂಧುಗಳು ಸೇರುವ ಪವಿತ್ರ ಜಾಗ.ಆದರೆ ಇಲ್ಲಿ 25 ವರ್ಷದ ಸೋಫಿ ಮೌರ್ ಎಂಬ ಹೆಸರಿನ ಈ ಹುಡುಗಿ ತನ್ನನ್ನು ತಾನು ಮದುವೆಯಾಗಿ ವಿಚ್ಛೇದನ ಕೊಟ್ಟುಕೊಂಡು ವಿಚಿತ್ರ ವರ್ತನೆಯನ್ನು ತೋರಿಸಿ ಮದುವೆ ಎಂಬ ಪದಕ್ಕೆ ಅರ್ಥವೇ ಇಲ್ಲದ ಹಾಗೆ ಮಾಡಿದ್ದಾಳೆ. ಆಕೆಯ ಮದುವೆ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದು ವೈರಲ್ ಕೂಡ ಆಗಿದೆ.
ಈ ಸುದ್ದಿಯನ್ನು ಬಿಳಿಗೌನ್ ತೊಟ್ಟು ತನ್ನ ಫೋಟೋ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದು,ಫೆ.20ರಂದು ಪೋಸ್ಟ್ ಮಾಡಿ “ಇಂದು ನನ್ನ ಜೀವನದಲ್ಲಿ ನಾನೇ ನಂಬಲಾರದ ದಿನ ನಾನು ನನ್ನನ್ನೇ ಮದುವೆಯಾಗಲು ಉಡುಪನ್ನು ಖರೀದಿಸಿ ಕೈಯಾರೆ ಒಂದು ಕೇಕ್ ಮಾಡಿ ಕತ್ತರಿಸಿದೆ. ಈ ಮೂಲಕ ನನ್ನನ್ನು ನಾನು ಮದುವೆ ಮಾಡಿಕೊಂಡೆ” ಎಂಬ ಕ್ಯಾಪ್ಷನ್ನಿಂದ ತಮ್ಮ ಫಾಲೋವರ್ಸ್ ಗಮನವನ್ನು ಸೆಳೆದಿದ್ದಾಳೆ. ನಿನ್ನೆ ವಿಚ್ಛೇದನದ ಮಾಹಿತಿಯನ್ನೂ ನೀಡಿದ್ದಾಳೆ.ಈ ವಿಚಿತ್ರ ಮದುವೆಗೆ ನೆಟ್ಟಿಗರು ನಾನಾ ತರಹದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ .ಇದನ್ನು ನ್ಯೂಸ್ ವೆಬ್ ಸೈಟ್ ವೊಂದು ವರದಿ ಮಾಡಿದೆ.