ನ್ಯೂಸ್ ನಾಟೌಟ್: ವಾಟ್ಸ್ಯಾಪ್ ಕಾಲ ಕಾಲಕ್ಕೆ ಫೀಚರ್ಸ್ ಅಪ್ಡೇಟ್ ಮಾಡುತ್ತಲೇ ಬಂದಿದೆ. ಇದೀಗ ಬಳಕೆದಾರರಿಗೆ ಹೊಸ ಫೀಚರ್ಸನ್ನುಪರಿಚಯಿಸುತ್ತಿದೆ. ಇನ್ಮುಂದೆ ವಾಟ್ಸ್ಯಾಪ್ ಮೂಲಕ ಮೂಡುವ ಕರೆಗಳನ್ನು ಯಾವಾಗ ಬೇಕೋ ಆ ಸಮಯಕ್ಕೆ ಶೆಡ್ಯೂಲ್ ಮಾಡಲು ಸಾಧ್ಯವಿದೆ. ಈ ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನೂತನ ಫೀಚರ್ಸ್ ಮೂಲಕ ಬಳಕೆದಾರರು ಕರೆಗಳನ್ನು ಶೆಡ್ಯೂಲ್ ಮಾಡಬಹುದು. ಆಂದರೆ ಗ್ರೂಪ್ ಕರೆ ಮಾಡಲು, ಮೀಟಿಂಗ್ ಮಾಡಲು, ರಿಮೈಂಡರ್ ಇಡಬೇಕಿಲ್ಲ. ಯಾವ ಸಮಯಕ್ಕೆ ಕರೆ ಮಾಡಬೇಕು ಅನ್ನೋದನ್ನು ಶೆಡ್ಯೂಲ್ ಮಾಡಿಕೊಳ್ಳಬಹುದು. ಅ ಸಮಯಕ್ಕೆ ಕರೆ ಕನೆಕ್ಟ್ ಆಗಲಿದೆ. ನೂತನ ಫೀಚರ್ಸ್ ಕೋಟ್ಯಂತರ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಕರೆ ಮಾತ್ರವಲ್ಲದೇ, ವಿಡಿಯೋ ಕಾಲ್ ಆಯ್ಕೆಗಳಿಗೂ ಶೆಡ್ಯೂಲ್ ಕರೆ ಬಳಕೆ ಮಾಡಬಹುದು. ಕಚೇರಿಗಳಲ್ಲಿ ಕೆಲಸದ ಒತ್ತಡವನ್ನು ಈ ಫೀಚರ್ ಕಡಿಮೆಗೊಳಿಸುವ ಸಾಧ್ಯತೆಗಳಿವೆ. ಈ ಹೊಸ ಫೀಚರ್ಸ್ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದೆ. ಸದ್ಯ ಶೆಡ್ಯೂಲ್ ಕರೆ ಪ್ರಾಯೋಗಿಕ ಹಂತದಲ್ಲಿದೆ. ಯಶಸ್ವಿ ಪ್ರಯೋಗದ ಬಳಿಕ ಬಳಕೆದಾರರಿಗೆ ಲಭ್ಯವಾಗಲಿದೆ.
ಶೆಡ್ಯೂಲ್ ಮಾಡಿದ ಬೆನ್ನಲ್ಲೇ ಶೆಡ್ಯೂಲ್ ಕರೆಯಲ್ಲಿ ಸೇರಿಸಿದವರಿಗೊದು ನೋಟಿಫಿಕೇಶನ್ ಹೋಗುತ್ತದೆ. ನಿಗದಿಪಡಿಸಿದ ಸಮಯದಲ್ಲಿ ಕರೆ ಕನೆಕ್ಟ್ ಆಗಲಿದೆ. ಬಿಸಿನೆಸ್ ಕಾರ್ಯದಲ್ಲಿ ತೊಡಗಿರುವವರಿಗೆ ಈ ಶೆಡ್ಯೂಲ್ ಕಾಲ್ ಹೆಚ್ಚಿನ ಪ್ರಯೋಜನವಾಗಲಿದೆ. ಗ್ರೂಪ್ ವಿಡಿಯೋ ಕಾಲ್ ಅಥವಾ ಕೇವಲ ಧ್ವನಿ ಮೂಲಕ ಗ್ರೂಪ್ ಕಾಲ್ ಮಾಡಲು ಕ್ಲಿಕ್ ಮಾಡಿದಾಗ, ಶೆಡ್ಯೂಲ್ ಕಾಲ್ ಆಯ್ಕೆ ತೋರಿಸಲಿದೆ. ಶೆಡ್ಯೂಲ್ ಆಯ್ಕೆ ಒತ್ತಿದರೆ, ದಿನಾಂಕ, ಸಮಯ ನಿಗದಿಪಡಿಸಿದರೆ ಕರೆ ಹೋಗುತ್ತದೆ. ಬೇಟಾ ಟೆಸ್ಟಿಂಗ್ನಲ್ಲಿ ಈ ಫೀಚರ್ಸ್ ಲಭ್ಯವಿದೆ. ಐಫೋನ್ ಬಳಕೆಗಾರರು ಆ್ಯಪಲ್ ಟೆಸ್ಟ್ ಫ್ಲೈಟ್ ಪ್ರೊಗ್ರಾಮ್ ಮೂಲಕ ಈ ಫೀಚರ್ಸ್ ಅನುಭವಿಸಬಹುದು. ಆದರೆ ಐಫೋನ್ ಬಳಕೆದಾರರು ತಮ್ಮ ವಾಟ್ಸ್ಯಾಪ್ ಅಪ್ಡೇಟ್ ಮಾಡಬೇಕು. ಇನ್ನು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಶೀಘ್ರದಲ್ಲೇ ಈ ಫೀಚರ್ಸ್ ಲಭ್ಯವಾಗಲಿದೆ. ಮೆಸೇಜಿಂಗ್ ಆಪ್ಲಿಕೇಶನ್ ಪೈಕಿ ಭಾರತದಲ್ಲಿ ಹಾಗೂ ವಿಶ್ವದಲ್ಲಿ ವಾಟ್ಸ್ಯಾಪ್ ಅತೀ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.