ನ್ಯೂಸ್ನಾಟೌಟ್: ತುಳುನಾಡಿದ ಆರಾಧನ ಶಕ್ತಿಯಲ್ಲೊಂದಾದ ಗುಳಿಗ ದೈವಕ್ಕೆ ಅವಮಾನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ರಮವನ್ನುಖಂಡಿಸಿ ಕಾಂಗ್ರೆಸ್ ಶಾಸಕ ಕಿಮ್ಮನೆ ರತ್ನಾಕರ ಅವರ ಅಭಿಮಾನಿಗಳು ತೀರ್ಥಹಳ್ಳಿಯಿಂದ ಮಂಗಳೂರಿಗೆ 50 ವಾಹನಗಳಲ್ಲಿ ಜಾಥಾ ನಡೆಸಿದ್ದಾರೆ.
ಮಂಗಳೂರಿಗೆ ಆಗಮಿಸಿದ ಜಾಥಾ ಪಚ್ಚನಾಡಿ ಬಳಿಯ ಬಂದಲೆಯ ಶ್ರೀಮಂತ ರಾಜ ಗುಳಿಗ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದ್ದಾರೆ.
ಗುಳಿಗ ದೈವಕ್ಕೆ ಅವಮಾನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೈವ ಕಾರಣಿಕ ತೋರಿಸಬೇಕು. ಗೃಹ ಸಚಿವರ ಹೇಳಿಕೆಯಿಂದ ಕರಾವಳಿ ಮತ್ತು ತೀರ್ಥಹಳ್ಳಿಯ ದೈವದ ಆರಾಧಕರಿಗೆ ನೋವಾಗಿದೆ. ಅವರಿಗೆ ಶಿಕ್ಷೆ ಕೊಡು ಎಂದು ಕೇಳುವುದಿಲ್ಲ. ಆದರೆ ಒಳ್ಳೆಯ ಬುದ್ದಿ ಕೊಡು ಎಂದು ಅರಿಕೆ ಮಾಡಿದ್ದಾರೆ. ಅಲ್ಲದೇ ದೈವ ತನ್ನ ಶಕ್ತಿಯ ಮೂಲಕ ಕಾರಣಿಕ ತೋರಿಸಬೇಕು. ದೈವ, ದೇವರನ್ನು ಅವಹೇಳನ ಮಾಡುವುದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದಿದ್ದಾರೆ.
ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿಗಳ ಜತೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ ಉಪಸ್ಥಿತರಿದ್ದರು.