ನ್ಯೂಸ್ ನಾಟೌಟ್: ಪ್ರಸ್ತುತ ಸಮಾಜದಲ್ಲಿ ಎಲ್ಲರೂ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಹುಡುಗಿಯರಿಗೆ ಮುಖದಲ್ಲಿ ಕೂದಲು ಬೆಳೆಯುವ ಸಮಸ್ಯೆ ಆದರೆ ಹುಡುಗರಿಗೆ ಕೂದಲು ಉದುರುವ ಸಮಸ್ಯೆ. ಇದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ನಡೆದಿದೆ.
ಪಂಜಾಬ್ ಮೂಲದ ಮಹಿಳೆ ಮಂದೀಪ್ ಕೌರ್ ಅವರಿಗೆ ಹಾರ್ಮೋನ್ ತೊಂದರೆಯಿದ್ದು ಮುಖದಲ್ಲಿ ಕೂದಲು ಬೆಳೆದಿದೆ. ಮನುಷ್ಯನ ದೇಹದ ಮೇಲೆ ಕೂದಲು ಬೆಳೆಯುವುದು ಸಹಜ. ಆದರೆ ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದ, ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಮಹಿಳೆಯರಲ್ಲೂ ಮುಖದ ಮೇಲೆ ಕೂದಲು ಬೆಳೆಯೋದಿದೆ, ಎಲ್ಲರ ಮುಂದೆ ಓಡಾಡಲು ಮುಜುಗರವಾಗುವಂತೆ ಮಾಡುತ್ತದೆ. ಆದರೆ ಈಕೆ ಇದ್ಯಾವುದರ ಭಯವೂ ಇಲ್ಲದೆ ಮುಖದ ಮೇಲೆ ಧೈರ್ಯವಾಗಿ ಕೂದಲು ಬೆಳೆಸಿಕೊಂಡಿದ್ದಾರೆ.
ಮನ್ದೀಪ್ ಎಂಬ ಮಹಿಳೆ ಹೀಗೆ ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ. ಅವರು ಮುಖದ ಮೇಲಿನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಹತ್ತಕ್ಕೂ ಹೆಚ್ಚು ವರ್ಷ ಜೊತೆಯಾಗಿ ಕೆಲಸ ಮಾಡಿದ ಪತಿಯೂ ಅವರನ್ನು ಬಿಟ್ಟು ಹೋಗಿದ್ದಾರೆ.
“ಮದುವೆಗೂ ಮುನ್ನ ಮುಖದಲ್ಲಿ ಕೂದಲಿರಲಿಲ್ಲ ಎಂದು ಮನದೀಪ್ ಹೇಳಿದ್ದಾರೆ. ಆದರೆ 2012ರ ನಂತರ ಪರಿಸ್ಥಿತಿ ಬದಲಾಯಿತು. ಮುಖ ಮತ್ತು ಗಲ್ಲದ ಮೇಲೆ ಕೂದಲು ಮೂಡಿತ್ತು. ಮುಖದ ಮೇಲಿನ ಕೂದಲು ನೋಡಿದ ಪತಿ ವಿಚ್ಛೇದನಕ್ಕೆ ಒತ್ತಾಯಿಸಲು ಪ್ರಾರಂಭಿಸಿದರು. ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ತನ್ನ ಮಾನಸಿಕ ಆರೋಗ್ಯವನ್ನು ನಿಭಾಯಿಸಲು ಮತ್ತು ಅಂತಹ ಪರಿಸ್ಥಿತಿಯಲ್ಲಿ ತನ್ನನ್ನು ಒಪ್ಪಿಕೊಳ್ಳಲು ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದೆ. ಅಂದಿನಿಂದ ಗುರು ಸಾಹಿಬರ ಆಶೀರ್ವಾದ ನನ್ನ ಮೇಲಿದೆ” ಎಂದು ಮನ್ದೀಪ್ ಹೇಳುತ್ತಾರೆ.
ಮನ್ದೀಪ್ ನಂತರದ ದಿನಗಳಲ್ಲಿ ತನ್ನ ಕೂದಲಿನೊಂದಿಗೆ ತನ್ನನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದರು. ಕೂದಲನ್ನು ಕ್ಷೌರ ಮಾಡಲು ನಿರಾಕರಿಸಿದರು.
ಸದ್ಯ ಮನ್ದೀಪ್ ತನ್ನ ಮುಖದ ಕೂದಲಿನ ಬಗ್ಗೆ ಯಾವುದೇ ಭಯವನ್ನು ಹೊಂದಿಲ್ಲ. ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಪೇಟವನ್ನು ಧರಿಸಲು ಆರಂಭಿಸಿದ್ದಾರೆ. ಮುಖದ ಕೂದಲನ್ನ, ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾರೆ. ಹೊಸ ಮೋಟಾರ್ ಬೈಕ್ನ್ನು ಓಡಿಸುತ್ತಾರೆ. ಜನರು ಸಹ ಅವರನ್ನು ಪುರುಷ ಎಂದು ಅಂದುಕೊಳ್ಳಲು ಆರಂಭಿಸಿದ್ದಾರೆ.