ನ್ಯೂಸ್ ನಾಟೌಟ್: ಸಾರ್ವಜನಿಕ ಈಜುಕೊಳದಲ್ಲಿ ಮೇಲುಡುಪು ಧರಿಸದೆ ಸಬ್ಬಾತ್ ಮಾಡುತ್ತಿದ್ದ ಮಹಿಳೆಯನ್ನು ಹೊರಹಾಕಲಾಗಿತ್ತು. ಇದರ ವಿರುದ್ಧ ಆಕೆ ಕಾನೂನು ಸಮರ ನಡೆಸಿದ್ದರು. ಪುರುಷರಿಗೆ ಒಂದು ನ್ಯಾಯ, ಮಹಿಳೆಯರಿಗೆ ಒಂದು ನ್ಯಾಯವೇ? ಈ ತಾರತಮ್ಯ ಏಕೆ ಎಂದು ಆಕೆ ಪ್ರಶ್ನಿಸಿದ್ದಳು.
ಜರ್ಮನಿಯ ಬರ್ಲಿನ್ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದವಿಲ್ಲದೆ ಸಾರ್ವಜನಿಕ ಈಜು ಕೊಳಗಳಲ್ಲಿ ಮೇಲಂಗಿ ಅಥವಾ ಮೇಲ್ವಸ್ತ್ರ ಇಲ್ಲದೇ ಈಜಲು ಸ್ಥಳೀಯ ಆಡಳಿತ ಅನುಮತಿ ನೀಡಿದೆ.
“ಪುರುಷರಂತೆ ಮಹಿಳೆಯರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕು. ಮೇಲಂಗಿ ಇಲ್ಲದೇ ಪುರುಷರಿಗೆ ಈಜಲು ಅವಕಾಶ ನೀಡಿದಂತೆ ಸಾರ್ವಜನಿಕ ಈಜು ಕೊಳಗಳಲ್ಲಿ ಸೂರ್ಯ ಸ್ನಾನಕ್ಕೆ ಮೇಲ್ವಸ್ತ್ರ ಇಲ್ಲದೇ ಮಹಿಳೆಯರಿಗೂ ಅವಕಾಶ ನೀಡಬೇಕು,’ ಎಂದು ಕೋರಿ ಬರ್ಲಿನ್ ಪಾಲಿಕೆಯ ಒಂಬುಡ್ಸ್ಮೆನ್ ಕಚೇರಿಗೆ ಮಹಿಳೆಯರೊಬ್ಬರು ಮನವಿ ಸಲ್ಲಿಸಿದರು.
ಇದನ್ನು ಪುರಸ್ಕರಿಸಿರುವ ಬರ್ಲಿನ್ ಪಾಲಿಕೆ, ಮಹಿಳೆಯರು, ಪುರುಷರು, ತೃತೀಯಲಿಂಗಿಗಳು ಸೇರಿ ಎಲ್ಲರೂ ಮೇಲಂಗಿ ಇಲ್ಲದೆ ಅರೆ ನಗ್ನವಾಗಿ ಸಾರ್ವಜನಿಕ ಈಜು ಕೊಳಗಳಲ್ಲಿ ಈಜಲು ಅವಕಾಶ ನೀಡಿದೆ. ಇದಕ್ಕಾಗಿ ಬಟ್ಟೆಗಳ ನಿಯಮಗಳಲ್ಲಿ ಬದಲಾವಣೆ ತಂದಿದೆ.
ಬರ್ಲಿನ್ ಮಹಿಳಾ ಘಟಕಗಳು ಈ ನಿರ್ಧಾರವನ್ನು ಸ್ವಾಗತಿಸಿದೆ. ಮಹಿಳೆ ತನಗಿಷ್ಟವಿದ್ದರೆ ಟಾಪ್ಲೆಸ್ ಆಗಿ ಸನ್ ಬಾತ್ ಅಥವಾ ಈಜಾಡಬಹುದು. ಇದು ಮಹಿಳೆಯರ ಸ್ವಾತಂತ್ರ್ಯವಾಗಿದೆ. ಪುರುಷರು ತಮಗಿಷ್ಟ ಬಂದಂತೆ ಟಾಪ್ಲೆಸ್ ಆಗಿ ಸನ್ ಬಾತ್ ಪಡೆಯಲು ಅವಕಾಶವಿದ್ದರೆ ಮಹಿಳೆಯರಿಗೂ ಬೇಕು. ಇಲ್ಲಿ ಮಾನದ ಪ್ರಶ್ನೆಯಲ್ಲ, ಪುರುಷರ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಮಹಿಳಾ ಸಂಘಟನೆಗಳು ಹೇಳಿವೆ.