ನ್ಯೂಸ್ ನಾಟೌಟ್: ಕಳೆದ ಕೆಲ ದಿನಗಳಿಂದ ಕರಾವಳಿ ಭಾಗದ ಜನ ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಉಷ್ಣಾಂಶದ ಮಟ್ಟ ತಾರಕಕ್ಕೇರಿದ್ದು ಸುಳ್ಯದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕವಾಗಿದೆ.
ಸುಳ್ಯದಲ್ಲಿ ಮಾ. 6ರಂದು 41 ಡಿಗ್ರಿ ಸೆಲ್ಸಿಯಸ್ವರೆಗೆ ಅಧಿಕವಾಗಿದ್ದು ಬಿಸಿಲಿನ ಶಾಖ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಗೆ ಹಲವು ಕಡೆಯಲ್ಲಿ ಉಷ್ಣಾಂಶ 40-41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ. ಉರಿಯುವ ಬೆಂಕಿಯಂತೆ ಭಾಸವಾಗುವ ಭಾರಿ ಬಿಸಿಲಿನ ವಾತವರಣ ದಿನೇ ದಿನೇ ಏರುತ್ತಲೇ ಇದೆ. 1 ಗಂಟೆಯಿಂದಲೇ ಭಾರೀ ಬಿಸಿಲಿನ ವಾತಾವರಣ ಮುಂದುವರಿದಿದ್ದು.1 ಗಂಟೆಯ ವೇಳೆಗೆ ಬಿಸಿಲ ಬೇಗೆ ಮತ್ತಷ್ಟು ಏರಿಕೆಯಾಗಿದೆ. ಇಂದು 41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿತ್ತು. ಕಳೆದ 3-4 ದಿನಗಳಿಂದ ಹಗಲಿನ ವೇಳೆ ಉಷ್ಣಾಂಶ 39-40 ಡಿಗ್ರಿ ಸೆಲ್ಸಿಯಸ್ ಯವರೆಗೆ ಏರಿಕೆಯಾಗಿತ್ತು.
ಮುಂಜಾನೆಯ ವೇಳೆ ಚಳಿ ಇದ್ದರೆ, ಮಧ್ಯಾಹ್ನದ ವೇಳೆ ವಿಪರೀತ ಬಿಸಿಲಿನ ವಾತಾವರಣ ಕಂಡು ಬರುತ್ತಿದ್ದು,ವಿಚಿತ್ರ ವಾತಾವರಣಕ್ಕೆ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚುತ್ತಿದ್ದು ಜನ ಕಳವಳಗೊಂಡಿದ್ದಾರೆ.