ನ್ಯೂಸ್ ನಾಟೌಟ್:ಮದುವೆ ಅನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ.ಅದೊಂದು ಸಂತೋಷದ ಘಳಿಗೆ.ಎಲ್ಲ ಕುಟುಂಬಸ್ಥರು,ಗುರುಹಿರಿಯರು,ಸಂಬಂಧಿಕರು ಸೇರುವ ಜಾಗ.ಆದರೆ ಇಲ್ಲೊಬ್ಬ ಮದುಮಗ ಕಂಠಪೂರ್ತಿ ಕುಡಿದು ಹಸೆಮಣೆಗೆ ಬಂದು ಕೂತಿದ್ದಾನೆ.ನಶೆಯಲ್ಲಿ ತೇಲಾಡಿದ್ದ ಯುವಕನ ವರ್ತನೆ ಕಂಡು ವಧು ಮದುವೆಯನ್ನೇ ರದ್ದು ಮಾಡಿ ಹೊರನಡೆದ ಘಟನೆ ವರದಿಯಾಗಿದೆ.
ಅಸ್ಸಾಂಮಿನ ನಲ್ಬರಿ ಎಂಬಲ್ಲಿ ಇತ್ತೀಚೆಗೆ ಮದುವೆ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಹೆಣ್ಣಿನ ಕುಟುಂಬ ಮಂಟಪಕ್ಕೆ ಬಂದು ಕೂತಿದೆ. ಹಸೆಮಣೆಯಲ್ಲಿ ಕೂತ ವರನಿಗೆ ಆರ್ಚಕರು ಆಚರಣೆಯನ್ನು ಹೇಗೆ ಅನುಸರಿಸಬೇಕೆಂದು ಹೇಳಿಕೊಡುತ್ತಿದ್ದಾರೆ. ಆದರೆ ವರ ಮಾತ್ರ ಅದನ್ನು ಕೇಳಿಸಿಕೊಳ್ಳುವಷ್ಟು ಸಹನೆಯೇ ಇಲ್ಲ. ತನ್ನದೇ ಮದುವೆಯಲ್ಲಿ ವರ ಕಂಠಪೂರ್ತಿ ಕುಡಿದು ಹಸೆಮಣೆಯಲ್ಲಿ ಪರಿಜ್ಞಾನನೇ ಇಲ್ಲದೇ ಕುಳಿತಿದ್ದಾನೆ.ಆತ ಕುಡಿದು ಟೈಟಾಗಿ ಮಂತ್ರವನ್ನು ಅರೆಬರೆಯಾಗಿ ಹೇಳುತ್ತಲೇ ಕುಡಿದು ಹಸೆಮಣೆಯಲ್ಲೇ ಬಿದ್ದಿದ್ದಾನೆ.ಇದನ್ನು ಗಮನಿಸುತ್ತಲೇ ಇದ್ದ ವಧು ಇಂಥ ಕುಡುಕನನ್ನು ಮದುವೆಯಾಗಲಾರೆ ಎಂದು ಹೇಳಿ ಮದುವೆಯನ್ನೇ ರದ್ದು ಮಾಡಿ ಮಂಟಪದಿಂದ ಹೊರ ಹೋಗಿದ್ದಾರೆ. ನಲ್ಬರಿ ಪೋಲೀಸ್ ಠಾಣೆಗೆ ತೆರಳಿ ವಧುವಿನ ಮನೆಯವರು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಪಾವತಿಸಬೇಕೆಂದು ವರನ ಮನೆಯವರ ವಿರುದ್ಧ ದೂರು ದಾಖಲಿಸಿದ ಘಟನೆ ನಡೆಯಿತು.
ವರ ಹಾಗೂ ವರನ ಅಪ್ಪ, ಸೇರಿದಂತೆ ಆತನ ಕುಟುಂಬದ ಬಹುತೇಕ ಸದಸ್ಯರು ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾರೆ. ನಾವು ಮದುವೆಗಾಗಿ ಎಲ್ಲವನ್ನು ತಯಾರು ಮಾಡಿಕೊಂಡು ಬಂದಿದ್ದರೂ ವರ ಹಾಗೂ ಆತನ ಮನೆಯವರು ಕುಡಿದು ಬಂದ ಕಾರಣ ಮದುವೆಯನ್ನು ರದ್ದು ಮಾಡಿದ್ದೇವೆ. ನಮಗೆ ಖರ್ಚು ಮಾಡಿದ ಹಣವನ್ನು ಮರಳಿಸಲಿ ಎಂದು ಠಾಣೆ ಮೆಟ್ಟಿಲು ಏರಿದ್ದಾರೆ.
ಕುಡಿದು ಬಂದು ಹಸೆಮಣೆ ಏರಿದ ವರನ ವಿಡಿಯೋ ಇದೀಗ ವೈರಲ್ ಆಗಿದೆ.