ನ್ಯೂಸ್ ನಾಟೌಟ್: ಸಾಕು ಪ್ರಾಣಿಗಳು ತನಗೆ ಅನ್ನ ಹಾಕಿದವರನ್ನು ಸದಾ ನೆನಪಿನಲ್ಲಿಡುತ್ತವೆ.ಅದರ ಪ್ರೀತಿಗೆ ಬೆಲೆ ಕಟ್ಟಲಸಾದ್ಯ. ಅದರಲ್ಲೂ ನಾಯಿಯಂತು ನಿಯತ್ತಿನ ಪ್ರಾಣಿ. ಪ್ರೀತಿಯಿಂದ ಸಾಕಿದವರ ಮೇಲೆ ನಿಷ್ಕಲ್ಮಶ ಪ್ರೀತಿಯನ್ನು ತೋರಿಸುವ ನಾಯಿ ಮನುಷ್ಯರಿಗಿಂತ ಎಷ್ಟೋ ಮೇಲು.ಇಲ್ಲೊಂದು ವಿಡಿಯೋದಲ್ಲಿ ತನ್ನ ಸಾಕು ಅಮ್ಮನ ಫೋನ್ ಕರೆಗೆ ಪ್ರತಿಕ್ರಿಯಿಸಿದ ನಾಯಿಯ ಹೃದಯಸ್ಪರ್ಶಿ ವಿಡಿಯೋ ನೋಡಿದರೆ ಎಂಥವರು ಬೆರಗಾಗುತ್ತಾರೆ.
ಮನುಷ್ಯ ಮತ್ತು ನಾಯಿಯದ್ದು ತಾಯಿ-ಮಗುವಿನ ಸಂಬಂಧದಂತೆ ಅಂದ್ರೆ ತಪ್ಪಾಗಲ್ಲ. ನಾಯಿಯನ್ನು ಕುಟುಂಬದಂತೆ ಸದಸ್ಯರಂತೆ ಪ್ರೀತಿಯಿಂದ ಸಾಕುತ್ತಾರೆ. ನಾಯಿ ಕೂಡ ಅಷ್ಟೇ ಪ್ರೀತಿಯನ್ನು ಮನೆಯವರಲ್ಲಿ ತೋರಿಸುತ್ತದೆ. ಇಲ್ಲೊಬ್ಬಳು ಸಾಕು ಅಮ್ಮ ದೂರವಾಣಿ ಕರೆಯಿಂದ ತನ್ನ ಪ್ರೀತಿಯ ನಾಯಿಯೊಂದಿಗೆ ಮಾತನಾಡುವ ಸನ್ನಿವೇಶವನ್ನು ನೋಡಬಹುದು. ಮೂಕ ಪ್ರಾಣಿಗೆ ಮಾತನಾಡಲು ಬರುತ್ತಿದ್ದರೆ ಅದರ ಮನಸ್ಸಿನ ಭಾವನೆಯನ್ನು ಹೇಳುತ್ತಿತ್ತು ಏನೋ? ಅದರೂ ತನ್ನ ಸಾಕು ತಾಯಿ ಫೋನ್ ಕರೆ ಧ್ವನಿಯನ್ನು ಕೇಳಿ ನಾಯಿ ಅದರ ಭಾಷೆಯಲ್ಲಿ ಪ್ರತಿಕ್ರಿಸಿದೆ. ಈ ದೃಷ್ಯ ನೊಡಿದರೆ ಎಂತ ಕಲ್ಲು ಮನಸ್ಸು ಕೂಡ ನಾಯಿ ಪ್ರೀತಿಗೆ ಸೋತು ನೀರಾಗಬಹುದು.