ನ್ಯೂಸ್ ನಾಟೌಟ್: ಇಂಗ್ಲೀಷ್ ಕೆಲವರಿಗೆ ಕಷ್ಟದ ಭಾಷೆ, ಕಲಿಕೆಯ ಹೊಸತರಲ್ಲಿ ಮಕ್ಕಳು ಎಡವೋದು ಸಹಜ. ಆದರೆ, ಶಿಕ್ಷಕರೂ ಕೆಲವೊಮ್ಮೆ ತಪ್ಪು ತಪ್ಪಾಗಿ ಪದಗಳನ್ನು ಅರ್ಥೈಸಿ ನಗೆಪಾಟಲಿಗೆ ಈಡಾಗಿಬಿಡುತ್ತಾರೆ. ಈಗ ಅಂಥದ್ದೇ ಒಂದು ಸನ್ನಿವೇಶ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿನಿಯೊಬ್ಬರ ಅಂಕಪಟ್ಟಿಯಲ್ಲಿ ಆಕೆ ಪಾಸ್(ಉತ್ತೀರ್ಣ) ಆಗಿದ್ದಾಳೆ ಎಂದು ಬರೆಯುವ ಬದಲಿಗೆ, ಶಿಕ್ಷಕರು ವಿದ್ಯಾರ್ಥಿನಿ “ಪಾಸ್ಡ್ ಅವೇ’ ( ಸತ್ತು ಹೋಗಿದ್ದಾಳೆ)ಎಂದು ಬರೆದಿದ್ದಾರೆ.
ಈ ಅಚಾತುರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದು, ಅನಂತ್ ಭನ್ ಎಂಬವರು ಹಂಚಿಕೊಂಡಿರುವ ಅಂಕಪಟ್ಟಿಯ ಫೋಟೋಗೆ, “ಶಿಕ್ಷಕರೇ ಹೀಗಾದರೆ, ಮಕ್ಕಳ ಇಂಗ್ಲೀಷಿನ ಕಥೆ ಏನು’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.