ತಮಿಳು ಯುವಕರ ಸಂಘದ ಸಭೆಯಲ್ಲಿ ನಿರ್ಧಾರ
ನ್ಯೂಸ್ ನಾಟೌಟ್: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ತಮಿಳು ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಮಿಳು ಯುವಕರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಮಾ.19 ರಂದು ಸುಳ್ಯದ ಅಮೃತಭವನದಲ್ಲಿ ಸಭೆ ಸೇರಿದ 175 ತಮಿಳು ಯುವಕರು ಮತ್ತು ಮುಖಂಡರು ಸಭೆಯಲ್ಲಿ ತಮಿಳರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದು, ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಯಿತೆಂದು ತಿಳಿದು ಬಂದಿದೆ. ತಮಿಳು ಮುಖಂಡ ಪೆರುಮಾಳ್ ಮತ್ತಿತರ ಕೆಲವರು ಸಭೆಯ ನೇತೃತ್ವ ವಹಿಸಿದ್ದರು.