ನ್ಯೂಸ್ ನಾಟೌಟ್: ವಿಷಯಕಾರಿ ಜಂತುವೊಂದು ವ್ಯಕ್ತಿಯೊಬ್ಬರಿಗೆ ಕಡಿದ ಹಿನ್ನೆಲೆಯಲ್ಲಿ ವೈದ್ಯರು ಸಂತ್ರಸ್ತನ ಕಾಲನ್ನೇ ಕತ್ತರಿಸಿ ತೆಗೆದಿದ್ದಾರೆ. ಶ್ರೀ ರಾಜನ್ದೈವ ಮತ್ತು ಪುರುಷದೈವ ದೈವಸ್ಥಾನದ ಕಂದ್ರಪ್ಪಾಡಿಯ ಪ್ರಧಾನ ಪರಿಚಾರಕರಲ್ಲಿ ಓರ್ವರಾಗಿರುವ ದೊಡ್ಡಣ್ಣ ಗೌಡ ಕಾಜಿಮಡ್ಕರ ಕಾಲಿಗೆ ವಿಷಕಾರಿಯು ಕಡಿದಿತ್ತು. ಇದೀಗ ವೈದ್ಯರು ಅವರ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ. ಈ ದುರ್ಘಟನೆ ಬಳಿಕ ತೀರ ಸಂಕಷ್ಟದಲ್ಲಿದ್ದ ದೊಡ್ಡಣ್ಣ ಗೌಡರ ನೋವಿಗೆ ಇದೀಗ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ( ರಿ.) ಸುಳ್ಯದ ಪ್ರಧಾನ ಕಾರ್ಯದರ್ಶಿ ಅಕ್ಷಯ್. ಕೆ. ಸಿ ಮಿಡಿದಿದ್ದಾರೆ. ನೆರವಿನ ಸಹಾಯ ಹಸ್ತವನ್ನು ಚಾಚಿದ್ದಾರೆ.
ದೊಡ್ಡಣ್ಣ ಗೌಡರಿಗೆ ಅಕ್ಷಯ್ ಅವರು ಕೃತಕ ಕಾಲಿನ ಹಾಗೂ ಅದರ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದರು. ಅದರಂತೆ ಶುಕ್ರವಾರ ಅವರ ಮನೆಗೆ ತೆರಳಿ ಧನ ಸಹಾಯ ಹಸ್ತಾಂತರಿಸಿ ಭರವಸೆ ತುಂಬಿದರು. ಇದೇ ಸಂದರ್ಭ ಅವರ ಮನೆಯಲ್ಲಿದ್ದ ವಿಕಲಚೇತನ ಹುಡುಗ ಅರ್ಪಿತ್ನ ಯೋಗ ಕ್ಷೇಮವನ್ನೂ ಅಕ್ಷಯ್ ಕೆ.ಸಿ ವಿಚಾರಿಸಿದರು. ಈ ಸಂದರ್ಭ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೇಣುಕುಮಾರ್ ಚಿತ್ತಡ್ಕ, ಲೋಕಪ್ಪ ಶ್ರೀರಡ್ಕ, ಪದ್ಮನಾಭ ಮೀನಾಜೆ, ಪ್ರೀತಮ್ ಮುಂಡೋಡಿ, ದೇವಚಳ್ಳ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಪಂಚಾಯತ್ ಸದಸ್ಯ ಭವಾನಿಶಂಕರ್ ಮುಂಡೋಡಿ, PAC ಬ್ಯಾಂಕ್ ಗುತ್ತಿಗಾರು ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು ಮತ್ತು ಊರಿನ ಗಣ್ಯರು, ದೊಡ್ಡಣ್ಣ ಗೌಡರ ಮನೆಯವರು ಮತ್ತಿತರರು ಉಪಸ್ಥಿತರಿದ್ದರು.