ನ್ಯೂಸ್ ನಾಟೌಟ್: ಮಕ್ಕಳಿಗೆ ಅಕ್ಷರ ಜ್ಞಾನ ಕೊಟ್ಟು ಸರಿದಾರಿಗೆ ಕೆರೆತರುವವನೇ ಗುರು. ಆದರೆ ಇಲ್ಲಿ ಗುರುವೇ ದಾರಿ ತಪ್ಪಿದ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಹೌದು, ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಶಿಕ್ಷಕನ ಕಾಮದಾಟ ಬಟ್ಟಾಬಯಲಾಗಿದೆ. ವಿದ್ಯಾರ್ಥಿನಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ರಾಯಚೂರು ತಾಲ್ಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕ ವಿಜಯ ಕುಮಾರ್ ಅಂಗಡಿ ಎನ್ನುವಾತ 10ನೇ ಕ್ಲಾಸ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಗೆ ನಿತ್ಯ ಕಾಲ್, ಮೆಸೇಜ್ ಮಾಡಿ ಆಕೆಯನ್ನು ಪೀಡಿಸುತ್ತಿದ್ದವನ ವಾಟ್ಸ್ಯಾಪ್ ಮೆಸೇಜ್ ಹಾಗೂ ಆಡಿಯೋಗಳು ಸಿಕ್ಕಿರುವ ವರದಿಯಾಗಿದೆ.
ಶಕ್ತಿನಗರ ಠಾಣಾ ಪೊಲೀಸರು ಕಾಮುಕ ಶಿಕ್ಷಕನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಆರೋಪಿ ಪ್ರಾಂಶುಪಾಲರು ಸಂತ್ರಸ್ತೆಯ ಫೋನ್ ನಂಬರ್ ಪಡೆದು ಆಕೆಯೊಂದಿಗೆ ಚಾಟಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ಮೊಬೈಲ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ, ಅಲ್ಲದೇ ಸಂತ್ರಸ್ತೆಗೆ ಕರೆ ಮಾಡಿ ತನ್ನನ್ನು ಸರ್ ಎಂದು ಕರೆಯಬೇಡ ಬಾಯ್ಫ್ರೆಂಡ್ನಂತೆ ಭಾವಿಸಬೇಕು ಎಂದು ಹೇಳಿದ್ದ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಶಾಲೆಯಲ್ಲಿ ಚೇಂಬರ್ಗೆ ಕರೆತಂದು ಮೈ ಕೈ ಮುಟ್ಟಿ ಅಸಭ್ಯ ವರ್ತನೆ ಮಾಡುತ್ತಿದ್ದ, ಪೋನ್ ಕರೆಗಳನ್ನು ಮಾಡಿ ಅನುಚಿತವಾಗಿ ಮಾತನಾಡಿದ್ದಾರೆ. ಸರ್ ಅನ್ನಬೇಡ ಬಾಯ್ ಫ್ರೆಂಡ್ ಎಂದು ಹೇಳುವಂತೆ ಪೀಡಿಸಿದ್ದಾನೆ. ಇದೀಗ ಆ ಆಡಿಯೋಗಳು ವೈರಲ್ ಆಗಿವೆ. “ಐ ಲವ್ ಯು ಸೋ ಮಚ್.. ಸ್ಪೆಂಡ್ ಒನ್ ಹವರ್ ಇನ್ ಮೈ ಹೋಮ್.. ಹೀಗಂತ ಮನೆ ವಿಳಾಸ ಕಳುಹಿಸಿ ಮನೆಗೆ ಬರುವಂತೆ ಹೇಳಿದ್ದಾನೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ವಿಡಿಯೋ ಕಾಲ್ ಮಾಡುವಂತೆ ಟಾರ್ಚರ್ ಕೊಟ್ಟಿದ್ದಾನೆ. ನೀನು 10ನೇ ಕ್ಲಾಸ್ ಇದ್ದೀಯಾ. ನನ್ನ ಜೊತೆ ಸಹಕರಿಸಿದರೇ ಪರೀಕ್ಷೆಯಲ್ಲಿ ಒಳ್ಳೆ ರೀತಿ ನೋಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿಲು ಪ್ರಯತ್ನಿಸಿದ್ದಾನೆ. ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆಯಲ್ಲಿ ನಿನ್ನ ವಿರುದ್ಧವಾಗಿ ಹೆಚ್ಚು ಅಂಕ ಬರದಂತೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಶಿಕ್ಷಕನ ಕಾಮಚೇಷ್ಟೆ ಅರಿತ ಸಾರ್ವಜನಿಕರು ಶಾಲೆಗೆ ನುಗ್ಗಿ ಧರ್ಮದೇಟು ನೀಡಲು ಮುಂದಾಗಿದ್ದು, ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಶಕ್ತಿನಗರ ಪೊಲೀಸರು ಆಗಮಿಸಿ ಆರೋಪಿ ಮುಖ್ಯ ಶಿಕ್ಷಕ ವಿಜಯಕುಮಾರ್ ಅಂಗಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ವಿಜಯ ಕುಮಾರ್ ಅಂಗಡಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕ್ಸೋ, ಲೈಂಗಿಕ ಕಿರುಕುಳ, ಜಾತಿ ನಿಂದನೆ ಸೇರಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.