ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಪ್ರತಿನಿತ್ಯ ಬೆಂಕಿ ದುರಂತ ಪ್ರಕರಣಗಳು ನಡೆಯುತ್ತಿದೆ. ಇದೀಗ ಮತ್ತೊಂದು ಬೆಂಕಿ ದುರಂತದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಗಡಿಕ್ಕಲು ಸಮೀಪ ನಡೆದಿದೆ.
.
ದಿವಂಗತ ಎನ್.ಎಸ್. ದೇವಿ ಪ್ರಸಾದ್ ಸಂಪಾಜೆ ಅವರಿಗೆ ಸೇರಿದ ರಬ್ಬರ್ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದೀಗ ಅಗ್ನಿಶಾಮಕ ದಳ ಕೂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ ಎಂದು ತಿಳಿದು ಬಂದಿದೆ. ದುರಂತಕ್ಕೆ ಕಾರಣ ಏನು ಅನ್ನುವುದು ಇನ್ನೂ ತಿಳಿದು ಬಂದಿಲ್ಲ. ಸಂಪಾಜೆಯ ಅರೆಕ್ಕಲು ಕಡೆಗೆ ಹೋಗುವ ಬೈಲು ಅಂಗನವಾಡಿಯ ಎದುರು ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬೆಂಕಿಯ ಜ್ವಾಲೆ ಹಲವು ಕಡೆ ವ್ಯಾಪಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.