ನ್ಯೂಸ್ ನಾಟೌಟ್: ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್ ಸ್ಟಾರ್ ಗಳಲ್ಲಿ ಒಬ್ಬರು. ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ತನ್ನ ವ್ಯಕ್ತಿತ್ವ ಹಾಗೂ ದಿನಚರಣೆಯ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಆಡಿದ ಒಂದು ಮಾತಿನಿಂದ ಕೊಡಗಿನ ಬೆಡಗಿ ಮತ್ತೆ ಸುದ್ದಿ ಆಗಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಮನೆಯಲ್ಲಿರುವ ಹಿರಿಯ ಕಾಲಿಗೆ ನಮಸ್ಕಾರ ಮಾಡಿಕೊಳ್ಳುವ ಸಂಪ್ರದಾಯದ ಬಗ್ಗೆ ಹಂಚಿಕೊಂಡಿದ್ದರು. ಒಮ್ಮೆ ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಆಗಿರಬಹುದು ಆದರೆ ಇದು ಕೊಡವ ಸಂಪ್ರದಾಯವೆಂದು ಹೇಳಿದ್ದಾರೆ.
“ನನಗೆ ಜೀವನದಲ್ಲಿ ಸಣ್ಣ ವಿಚಾರಗಳು ಕೂಡ ಮಹತ್ವದಾಗುತ್ತದೆ. ನಾನು ಪ್ರತಿನಿತ್ಯ ನನ್ನ ಸ್ನೇಹಿತರು, ಸಾಕು ಪ್ರಾಣಿಗಳೊಂದಿಗೆ ದಿನಕಳೆಯುತ್ತೇನೆ ಅದು ನನಗೆ ಖುಷಿ ಕೊಡುತ್ತದೆ. ನನಗೆ ಯಾರಾದರೂ ಏನಾದರೂ ಹೇಳಿದಾಗ, ಅದು ಮನಸ್ಸಿಗೆ ತಟ್ಟಿದರೆ ಅದನ್ನು ನಾನು ಡೈರಿಯಲ್ಲಿ ಬರೆದಿಡುತ್ತೇನೆ. ನನಗೆ ಮನೆಗೆ ಹಿಂತಿರುಗಿ, ಪ್ರತಿಯೊಬ್ಬರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವ ಅಭ್ಯಾಸವಿದೆ. ನಾನು ನನ್ನ ಮನೆ ಕೆಲಸದವಳ ಪಾದವನ್ನು ಸ್ಪರ್ಶಿಸುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡಲು ಇಷ್ಟಪಡುತ್ತೇನೆ. ಹಾಗೆ ಮಾಡಿದಾಗ ಒಬ್ಬ ವ್ಯಕ್ತಿಯಾಗಿ ನಾನು ಯಾರು ಎಂಬುದು ಗೊತ್ತಾಗುತ್ತದೆ” ಎಂದು ಹೇಳಿರುವುದು ಈಗ ವೈರಲ್ ಆಗಿದೆ.
ಇತ್ತೀಚೆಗಷ್ಟೇ ʼಮಿಷನ್ ಮಜ್ನುʼ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ, ರಣ್ಬೀರ್ ಕಪೂರ್ ಅವರ ʼಆ್ಯನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.