ನ್ಯೂಸ್ ನಾಟೌಟ್: ಬೀದರ್ ಜಿಲ್ಲೆಯಲ್ಲಿ ಮಾರ್ಚ್ ೧೭ರಿಂದ ಮೇಲ್ಮೈ ಸುಳಿಗಾಳಿ ಕಾರಣದಿಂದಾಗಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ.ಆಲಿಕಲ್ಲು ಮಳೆಯಿಂದಾಗಿ ಬೀದರ್ನ ಕೆಲ ಪ್ರದೇಶ ಕಾಶ್ಮೀರದಂತೆ ಭಾಸವಾಗುತ್ತಿದ್ದು, ವರುಣನ ಆರ್ಭಟಕ್ಕೆ ಜಿಲ್ಲೆಯ ರೈತರು ಕಂಗಾಲಾಗಿದ್ದರೆ.
ನೂರಾರು ಎಕರೆಯಷ್ಟು ಜಮೀನಿನಲ್ಲಿ ಬೆಳೆಸಿದ್ದ ಜೋಳ, ಕುಸುಬಿ, ಕಬ್ಬು ಬೆಳೆ ನಾಶವಾಗಿದ್ದು, ರೈತರನ್ನ ಕಂಗಾಲು ಮಾಡಿದೆ. ಗುಡುಗು ಸಿಡಿಲು ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಬೃಹತ್ ಗಾತ್ರದ ಮರಗಳು ನೆಲ್ಲಕ್ಕುರುಳಿದ್ದು, ಕೆಲವು ಕಡೆ ಮನೆಗಳ ಮೇಲೆಯೂ ಮರ ಬಿದ್ದು ಜಖಂಗೊಂಡಿವೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬೃಹತ್ ಮರ ಧರೆಗೆ ಉರುಳಿದ್ದು ಮರದ ಕೆಳಗೆ ನಿಂತ್ತಿದ್ದ ಕಾರು ಮತ್ತು ಆಟೋ ಸಂಪೂರ್ಣವಾಗಿ ಜಖಂ ಆಗಿವೆ.
ಮಳೆಯ ಜೊತೆಗೆ ಗಾಳಿಯಿಂದಾಗಿ ಕೋಳಿ ಸಾಕಾಣಿಕೆ ಸೇಡ್ ಗಾಳಿಗೆ ಹಾರಿ ಹೋಗಿದ್ದು ಸಾವಿರಾರು ಕೋಳಿಗಳು ಸಾವನಪ್ಪಿದೆ. ಕಳೆದ ಮೂರು ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದ್ದು ಬೀದರ್ನ ಜನರು ತತ್ತರಿಸಿ ಹೋಗಿದ್ದಾರೆ.ಆಲಿಕಲ್ಲು ಮಳೆಯಿಂದ ಬೀದರ್ ಕರ್ನಾಟಕದ ಕಾಶ್ಮೀರವಾಗಿ ಬದಲಾಗಿದೆ. ರಾಶಿ ರಾಶಿ ಆಲಿಕಲ್ಲುಗಳನ್ನು ನೋಡಿದ ಜನರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರೆ, ಇನ್ನೊಂದೆಡೆ ರೈತರು ಕಣ್ಣೀರು ಸುರಿಸುತ್ತಿದ್ದಾರೆ.