ನ್ಯೂಸ್ ನಾಟೌಟ್: ಪಾಟ್ನಾ ರೈಲು ನಿಲ್ದಾಣದಲ್ಲಿದ್ದ ಜನ ಸಾಮಾನ್ಯರು ತಲೆ ತಗ್ಗಿಸುವಂತಹ ಘಟನೆಯೊಂದು ಭಾನುವಾರ ಮಾರ್ಚ್ ೧೯ ರಂದು ನಡೆದಿತ್ತು. ರೈಲ್ವೆ ನಿಲ್ದಾಣದ ಟಿವಿ ಪರದೆಗಳಲ್ಲಿ 3 ನಿಮಿಷಗಳ ಕಾಲ ಅಶ್ಲೀಲ್ ವಿಡಿಯೋ ಪ್ಲೇ ಆಗಿದ್ದು ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ವಿಶ್ವವಿಖ್ಯಾತ ಪೋರ್ನ್ ತಾರೆ ಕೇಂದ್ರ ಲಸ್ಟ್ (Kendra Lust) ವಿಡಿಯೋವನ್ನು ಶೇರ್ ಮಾಡಿದ್ದು, ಅದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ನೀಡಿದ್ದಾರೆ.
ಜೊತೆಗೆ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಶ್ಲೀಲ ಚಲನಚಿತ್ರದ ವಿಡಿಯೊ ತಮ್ಮದೆಂದು ಹೇಳಿಕೊಂಡಿದ್ದಾರೆ. ಇವರ ಈ ಟ್ವೀಟ್ ಗೆ ನಾನಾ ಬಗೆಯ ವಿಚಿತ್ರ ಕಮೆಂಟ್ ಗಳು ಹರಿದುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕೆಯ ಪೋಸ್ಟ್ ವೈರಲ್ ಆಗಿದೆ.
ರೈಲು ನಿಲ್ದಾಣದಲ್ಲಿ ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಆಕಸ್ಮಿಕವಾಗಿ ಅಶ್ಲೀಲ ವಿಡಿಯೊವನ್ನು ಪ್ಲೇ ಮಾಡಲಾಗಿದೆ ಎಂಬ ಅಂಶವನ್ನು ಶ್ಲಾಘಿಸಿ ತಮ್ಮದೇ ಟ್ವಿಟರ್ ಖಾತೆಯಿಂದ ಈಗ ವೈರಲ್ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಅಧಿಕಾರಿಗಳು ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿತ್ತು. ಕ್ಲಿಪ್ ಅನ್ನು ಶೀಘ್ರದಲ್ಲೇ ತೆಗೆದುಹಾಕಲಾಯಿತು ಮತ್ತು ಜಾಹೀರಾತು ಫಲಕದ ಉಸ್ತುವಾರಿ ವಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು.