ನ್ಯೂಸ್ ನಾಟೌಟ್ : ಮನೆಯೊಂದರಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಹಿನ್ನೆಲೆಯಲ್ಲಿ ರುಕಿಯಾ (50) ಎಂಬಾಕೆಯ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಬಂಟ್ವಾಳದ ಬೋಳಂತೂರು ಗ್ರಾಮದ ವಿಟ್ಲಕೋಡಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೀಪ್.ಜಿ.ಎಸ್, ಪೊಲೀಸ್ ಉಪ- ನಿರೀಕ್ಷಕರಾದ ಮಂಜುಳಾ ಎಲ್. ಹಾಗೂ ಸಿಬಂದಿಗಳು ದಾಳಿ ನಡೆಸಿ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಲತೀಫ್ ಎಂಬಾತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂಧಿತ ರುಕಿಯಾ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 3 ದ್ವಿಚಕ್ರ ವಾಹನ, 9 ಮೊಬೈಲ್ ಫೋನ್, 5,000 ರೂ. ನಗದು ಸೇರಿ1,76,580 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.