ನ್ಯೂಸ್ನಾಟೌಟ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಅಂತರಾಷ್ಟ್ರೀಯ ಗಡಿ ರೇಖೆಯನ್ನು ದಾಟಿ ಉಗ್ರರು ಮತ್ತು ಒಳನುಸುಳುವವರ ಬಗ್ಗೆ ಆಗಾಗೆ ಸುದ್ದಿಯಾಗುತ್ತಿರುತ್ತವೆ. ಆದರೆ, ಶನಿವಾರ ಮಾರ್ಚ್ ೧೮ರಂದು ಅಪರೂಪದ ಅತಿಥಿಯೊಬ್ಬರು ಬಾರತೀಯ ಗಡಿ ಪ್ರದೇಶವನ್ನು ದಾಟಿ ಒಳ ಪ್ರವೇಶಿಸಿದ್ದಾರೆ.
ಸಾಂಬಾದ ರಾಮಗಢ ಉಪ ವಲಯದಲ್ಲಿ ಪಾಕಿಸ್ತಾನದ ಕಡೆಯಿಂದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಚಿರತೆಯೊಂದು ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಸಂಜೆ 7 ಗಂಟೆ ಸುಮಾರಿಗೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಡಿಯ ಸಮೀಪ ವಾಸಿಸುವ ಸ್ಥಳೀಯರಿಗೆ ಸ್ಥಳೀಯ ಪೊಲೀಸರು ಎಚ್ಚರಿಕೆ ನೀಡಿದ್ದು, ಭಾರತೀಯ ಸೇನೆ ಇದನ್ನು ನಿಜವೆಂದು ಖಚಿತ ಪಡಿಸಿದೆ.
ಈ ವಿಡಿಯೋದ ಪೋಸ್ಟ್ ಹಲವು ಸ್ವಾರಸ್ಯಕರ ಕಾಮೆಂಟ್ಗಳನ್ನು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಈ ರೀತಿಯ ಕದ್ದು ಗಡಿ ಒಳನುಸುಳುತ್ತಿರುವ ಅತಿಥಿಗೆ ಸ್ವಾಗತ”. “ಚಿರತೆ ಸರಿಯಾದ ರಾಷ್ಟ್ರವನ್ನು ಆಯ್ಕೆ ಮಾಡಿದೆ” ಮತ್ತು “RAW ಏಜೆಂಟ್ ಮಿಷನ್ನಿಂದ ಹಿಂತಿರುಗುತ್ತಿದ್ದಾರೆ” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.