ನ್ಯೂಸ್ ನಾಟೌಟ್ : ಕರಾವಳಿ ಭಾಗದ ಪ್ರಮುಖ ಕೃಷಿಯಲ್ಲಿ ಅಡಿಕೆ ಕೃಷಿ ಕೂಡ ಒಂದು. ಆದರೆ ಇದರ ನಿರ್ವಹಣೆ ಬಹಳ ಕಷ್ಟ ಅನ್ನುವುದು ಕೆಲವರ ಅಭಿಪ್ರಾಯ.ಕಾಲ ಕಾಲಕ್ಕೆ ನೀರು,ಗೊಬ್ಬರ ಯಥೇಚ್ಛವಾಗಿ ಬೇಕಾಗುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಮಿಕರ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ.ಕಾರ್ಮಿಕರಿದ್ದರೂ ಅವರ ಸಂಬಳ ಗಗನಕ್ಕೇರಿದೆ. ಹೌದು ಇದಕ್ಕೆ ಪರಿಹಾರ ಎನ್ನುವಂತೆ ಇಲ್ಲೊಬ್ಬ ವ್ಯಕ್ತಿ ವಿನೂತನವಾದ ಟ್ರೀ ಸ್ಕೂಟರ್ ಪತ್ತೆ ಹಚ್ಚಿದ್ದಾರೆ.
ಅಂದ ಹಾಗೆ ಹೆಸರೇ ಹೇಳುವಂತೆ ಇದು ಅಡಿಕೆ ಮರಕ್ಕೆ ಬಳಸಬಹುದಾದ ಯಂತ್ರ. ರೈತ ಸ್ನೇಹಿಯಾಗಿದ್ದು ಯಾರು ಬೇಕಾದರೂ ಇದರ ಬಳಕೆ ಮಾಡಬಹುದಾಗಿದೆ. ಯಂತ್ರವು ಆಸನ ಮತ್ತು ಸೀಟ್-ಬೆಲ್ಟ್ನೊಂದಿಗೆ ಕಾರ್ಯನಿರ್ವಹಿಸುವುದು ಮಾತ್ರವಲ್ಲದೇ ಕೈಗಳನ್ನು ಬಳಸದೆ ಉಪಯೋಗಿಸಬಹುದು.ರೈತರ ಕಷ್ಟಗಳನ್ನು ಅರಿತುಕೊಂಡಿರುವ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ.ಅಲ್ಲದೆ ಇದು ರೈತರ 20 ಪ್ರತಿಶತದಷ್ಟು ವೆಚ್ಚವನ್ನು ಕಡಿಮೆ ಮಾಡಿ ರೈತರಿಗೆ ಆರ್ಥಿಕವಾಗಿ ಸಹಾಯವಾಗಬಲ್ಲದು.
ಇದು ಬೇರೆ ಎಲ್ಲ ವಿಧಾನಗಳಲ್ಲಿ ಕೊಯ್ಲು ಮಾಡಿದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ಪಡೆಯಲು ಸಹಾಯವಾಗುತ್ತದೆ ಎನ್ನುವುದು ಗಣಪತಿ ಭಟ್ ಅವರ ಅಭಿಪ್ರಾಯ. ಈ ಮೆಷಿನ್ ಆವಿಷ್ಕಾರ ಮಾಡಲು ಹಲವು ದಿನಗಳು ಹಿಡಿಯಿತು.ಈ ಆವಿಷ್ಕಾರದಲ್ಲಿ ತೊಡಗಿದಾಗ ತುಂಬಾ ಜನ ನನ್ನನ್ನು ಹುಚ್ಚ ಎಂದಿದ್ದರು.ಆದರೆ ಅದರ ರಿಸಲ್ಟ್ ನೋಡಿ ಜನರಿಗೆ ಅರ್ಥವಾಗಿದೆ.ಮಾತ್ರವಲ್ಲ ಕೃಷಿಕರಿಗೆ ಸಹಾಯವಾಗಬಲ್ಲ ಮೆಷಿನ್ ಕಂಡು ಹಿಡಿದು ನನಗೆ ತೃಪ್ತಿಯಾಗಿದೆ ಎನ್ನುತ್ತಾರೆ ಗಣಪತಿ ಭಟ್.