ನ್ಯೂಸ್ ನಾಟೌಟ್ : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದ ಮೇರೆಗೆ ಕೊಲೆ ಪ್ರಕರಣದ ಸಾಕ್ಷಿಯೊಬ್ಬರ ಹತ್ಯೆ ಘಟನೆಯ ನಂತರ, ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ದರೋಡೆಕೋರ ಅತೀಕ್ ಅಹ್ಮದ್ ನ ಹತ್ತಿರದ ಸಂಬಂಧಿಯ ಬಂಗಲೆಯನ್ನು ಬುಲ್ಡೋಜರ್ಗಳ ದಾಳಿ ಮಾಡಿ ಧ್ವಂಸ ಮಾಡಲಾಗಿದೆ.
ಇಂದು ಮಾರ್ಚ್ 1 ರ ಬೆಳಗ್ಗೆ ಶೂಟೌಟ್ ಬಳಿಕ ನಾಪತ್ತೆಯಾಗಿರುವ ಅತೀಕ್ ಅಹ್ಮದ್ನ ಮತ್ತೊಬ್ಬ ಆಪ್ತ ಸಹಾಯಕ ಜಾಫರ್ ಅಹ್ಮದ್ನ ಪ್ರಯಾಗ್ರಾಜ್ನಲ್ಲಿರುವ ಮನೆಯನ್ನು ಬುಲ್ಡೋಜರ್ಗಳು ಕೆಡವಿ ಹಾಕಿವೆ. ಬಂಗಲೆಯಲ್ಲಿ ಅತೀಕ್ ಅಹ್ಮದ್ ಅವರ ಪತ್ನಿ ಮತ್ತು ಮಗ ಕೂಡ ಇದ್ದರು ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಬಂಗಲೆಯಲ್ಲಿ ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.
2005 ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಪ್ರಯಾಗ್ರಾಜ್ನಲ್ಲಿರುವ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದರು. ಐವರು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಆತನ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.
ದರೋಡೆಕೋರ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಅವರು ಹತ್ಯೆಗೆ ಪ್ರಮುಖ ರೂವಾರಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಫೆ.೨೭ರಂದು ಬೆಳಗ್ಗೆಯೇ ಪೊಲೀಸರು ಲಕ್ನೋದಲ್ಲಿರುವ ಅತೀಕ್ ಅಹ್ಮದ್ ನ ಮನೆಯ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.