ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ದಧಿಬಬನ್ಪುರ ನಿವಾಸಿಯಾದ ಆಕೆ ಪರೀಕ್ಷೆ ಬರೆಯುವ ಸಲುವಾಗಿ ಮನೆಯಿಂದ ಆನಂದ್ ಪುರದಲ್ಲಿರುವ ಕಾಲೇಜಿಗೆ ಹೊರಡುವ ಸಿದ್ಧತೆಯಲ್ಲಿದ್ದಾಗ ಆಕೆಗೆ ಹಾವೊಂದು ಕಚ್ಚಿದೆ. ಆದರೂ ವಿದ್ಯಾರ್ಥಿನಿ ಭಯಪಡದೆ ಆಸ್ಪತ್ರೆಗೂ ಹೋಗದೆ ಪರೀಕ್ಷೆ ಬರೆಯಲು ತೆರಳಿದ್ದಾಳೆ. ಪರೀಕ್ಷೆ ಬರೆಯುತ್ತಿದ್ದಂತೆಯೇ ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿದ್ದು ಸಂಕಟದ ಅನುಭವವಾಗಿದೆ.
ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ನಂತರ ಪರೀಕ್ಷಾ ಕೊಠಡಿಯಿಂದಲೇ ಆಕೆಯನ್ನು ಆನಂದ್ ಪುರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರೀಕ್ಷೆಗೆ ತೆರಳುವ ಮುನ್ನ ಮನೆಯ ಹಿತ್ತಲಿಗೆ ಹೋಗಿದ್ದು, ಈ ವೇಳೆ ಕಪ್ಪು ಬಣ್ಣದ ಹಾವೊಂದು ಆಕೆಗೆ ಕಚ್ಚಿದೆ ಎನ್ನಲಾಗಿದೆ. ಆದರೂ ಆಕೆ ಪರೀಕ್ಷೆ ಬರೆದಿದ್ದು, ನಂತರ ಮಧ್ಯದಲ್ಲಿ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಲಕಿಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.